ರಾಯಚೂರು. ಭಾರತೀಯ ಜನತಾ ಪಾರ್ಟಿಯ ಸದಸ್ಯತಾ ಅಭಿಯಾನ ಕಾರ್ಯಕ್ರಮ ನಗರದ ವಿವಿಧ ಬಡಾವಣೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ನಗರದ ಶಶಿಮಹಲ್ ವೃತ್ತದಲ್ಲಿ ವಾರ್ಡ್ ನಂಬರ್ 12 , 13 , 14 , 15 ನಾಲ್ಕು ವಾರ್ಡ್ ಗಳ ಸದಸ್ಯತಾ ಅಭಿಯಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಜಲ್ದಾರ್ ರವರು ಮಾತನಾಡಿ ಭಾರತೀಯ ಜನತಾ ಪಾರ್ಟಿಗೆ ಹೆಚ್ಚಿನ ಪ್ರಮಾಣದಲ್ಲಿ ಸದಸ್ಯತ್ವ ಮಾಡಿಸಲು ಮುಂದಾಗಬೇಕಿದೆ ಇದರಿಂದ ಪಕ್ಷ ಸಂಘಟನೆ , ನಾಯಕತ್ವ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ ಎಂದರು.
ನಗರ ಮಂಡಲ ಅಧ್ಯಕ್ಷ ಊಟ್ಕೂರು ರಾಘ ವೇಂದ್ರ ಅವರ ಅಧ್ಯಕ್ಷತೆ ಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಆರ್ ಡಿ ಎ ಮಾಜಿ ಅಧ್ಯಕ್ಷ ರಾಜಕುಮಾರ, ನಗರ ಪ್ರಧಾನ ಕಾರ್ಯದರ್ಶಿ ಕಡಗೋಲು ರಾಮಚಂದ್ರ, ವಿಜಯ್ ಕುಮಾರ್ ಸಜ್ಜನ, ಪಲುಗುಲ ನಾಗರಾಜ, ಯು. ಅಂಜಿ ನಯ್ಯ, ಶ್ರೀನಿವಾಸ ಯಾದವ, ರಾಹುಲ್ ಜಲ್ದಾರ್, ಸುರೆಶ್ ಬಾಬು, ವಿರೇಶ್, ಜಂಬಣ್ಣ, ನಾಗೇಶ್, ನಾಗರಾಜ ಬೋವಿ, ಪ್ರಭು ಯಾದವ್, ನರಸಿಹಲು ಪ್ರಸಾದ ಜೈನ್, ಪಲುಗುಲ ಚಿನ್ನಯ್ಯ, ಈರಪ್ಪ, ಲಕ್ಷ್ಮಣ, ವಿನೋದ್ ಕುಮಾರ್, ರಮೇಶ್ ರವರು ಹಾಜರಿದ್ದರು.