Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime NewsLocal News

ರೈಲ್ವೆ ಟ್ರ್ಯಾಕ್ ಬಳಿ ಯುವಕನ ಶವ ಪತ್ತೆ ಕೊಲೆ ಶಂಕೆ

ರೈಲ್ವೆ ಟ್ರ್ಯಾಕ್ ಬಳಿ ಯುವಕನ ಶವ ಪತ್ತೆ ಕೊಲೆ ಶಂಕೆ

ರಾಯಚೂರ. ನಗರದ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಟ್ರಾಕ್ ಮೇಲೆ ಯುವಕನೊಬ್ಬನ ಶವ ಪತ್ತೆಯಾಗಿದ್ದು, ಅನುಮಾನಸ್ಪದವಾಗಿ ಮೃತಪ ಟ್ಟಿರುವ ಘಟನೆ ನಡೆದಿದೆ.

ಮೃತಪಟ್ಟಿರುವ ಯುವಕ ಹನುಮಂತ (23) ಮಾನ್ವಿ ತಾಲೂಕಿನ ಬೈಯಿಲ್ ಮರ್ಚೆಡ್ ನಿವಾಸಿ‌ ಎಂದು ತಿಳಿದು ಬಂದಿದೆ.
ಮೃತ ಹನುಮಂತ ನಗರದ ಖಾಸಗಿ ಕಾಲೇಜಿ ನಲ್ಲಿ ಬಿಎಡ್ ಓದುತ್ತಿದ್ದ ಹಾಸ್ಟೆಲ್‌ನಲ್ಲಿ ಉಳಿದು ಕೊಂಡು ಬಿಎಡ್ ಅಭ್ಯಾಸ ಮಾಡುತ್ತಿದ್ದ ಎನ್ನ ಲಾಗಿದೆ.
ಸೋಮವಾರ ಸಂಜೆ ಹಾಸ್ಟೆಲ್‌ನಿಂದ ಬ್ಯಾಗ್ ಸಮೇತ ಹೊರ ನಡೆದಿದ್ದ ಹನುಮಂತ ಮಂಗಳವಾರ ಬೆಳಗ್ಗೆ ಅನುಮಾನಾಸ್ಪದವಾಗಿ ರೈಲ್ವೆ ಟ್ರ್ಯಾಕ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಸ್ಥಳಕ್ಕೆ ರೈಲ್ವೆ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ಕೊಲೆ ಮಾಡಿ ತಂದು ಹಾಕಿದ್ದಾರೆ ಎಂದು ಕುಟುಂಬಸ್ಥರು ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Megha News