ರಾಯಚೂರು. ತಾಲೂಕಿನ ಮಲಿಯಾಬಾದ್ ಅರಣ್ಯ ಪ್ರದೇಶದಲ್ಲಿ ಚಿರತೆ ಪ್ರತ್ಯೇಕ್ಷವಾಗಿದ್ದು, ಗ್ರಾಮದಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿದೆ, ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಚಿರತೆ ಮೂರು ನಾಲ್ಕು ಕಡೆಗೆ ಬೋನ್ ಅಳವ ಡಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬೋನ್‌ನಲ್ಲಿ ಕುರಿ ಮತ್ತು ನಾಯಿ ಕಟ್ಟಿ ಹಾಕಿ ಚಿರತೆ ಒಳಗೆ ಪ್ರವೇಶಿಸುವಂತೆ ಮಾಡಲಾಗಿದೆ, ಆದರೆ ಚಿರತೆಯು ಬೋನ್ ಪ್ರವೇಶಿಸುತ್ತಿಲ್ಲ,
ಮಾಲಿಯಾಬಾದ್ ಗೋಶಾಲೆಯ ಸುತ್ತಲಿನ ಗುಡ್ಡಗಾಡು ಪ್ರದೇಶದಲ್ಲಿ ಬೊನ್ ಗಳನ್ನು ಅಳವಡಿಸಿದೆ. ಚಿರತೆಯ ಚಲನವಲನ ಗುರು ತಿಸಲು, ರಾತ್ರಿವೇಳೆ ಆಟೋಮೆಟಿಕ್ ಕ್ಯಾಮೆ ರಾಗಳು, ಮತ್ತೆ ಹಗಲಿನ ಸಮಯದಲ್ಲಿ ಆಟೋ ಮೆಟಿಕ್ ಕ್ಯಾಮೆರಾಗಳನ್ನು 6 ರಿಂದ 8 ಪ್ರದೇಶ ದಲ್ಲಿ ಸೂಕ್ಷ್ಮ ಸ್ಥಳಗಳಲ್ಲಿ ಅಳವಡಿಸ ಲಾಗಿದೆ.
ಪ್ರತಿದಿನ ಚಿರತೆ ಕಾವಲಿಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಗಸ್ತು ತಿರುಗಾಡುತ್ತಿದ್ದಾರೆ, ಹಗಲಿನ ಸಮಯದಲ್ಲಿ ಒಂದು ತಂಡ, ರಾತ್ರಿ ಸಮಯದಲ್ಲಿ ಒಂದು ತಂಡ ಸದಾ ಕಾರ್ಯಾಚರಣೆ ನಡೆಸುತ್ತಿ ದ್ದಾರೆ. ಪ್ರತಿದಿನ ಚಿರತೆಯ ಚಲನವಲನ ಕಂಡು ಹಿಡಿದು ಇಲಾಖೆ ಅಳವಡಿಸಿರುವ ಕ್ಯಾಮೆ ರಾಗಳಲ್ಲಿ ಸಂಗ್ರಹಗೊಂಡ ಫೋಟೋ ಮಾಹಿತಿ ಕಲೆಹಾಕಿ ಯಾವ ಪ್ರದೇಶದ ಕಡೆಗೆ ಹೆಚ್ಚು ಸಂಚರಿಸುತ್ತಿರುವ ಕುರಿತು ಅಧ್ಯಯನ ಅರಣ್ಯ ಇಲಾಖೆಯಿಂದ ಕಾರ್ಯಚರಣೆಯಲ್ಲಿದೆ.
ಸಾರ್ವಜನಿಕರ ಜೀವಕ್ಕೆ ಅಪಾಯವಾಗಬಾರದು ಎನ್ನುವ ಉದ್ದೇಶಕ್ಕಾಗಿ ಗೋಶಾಲೆಯ ಪ್ರವೇಶ ದ್ವಾರದಲ್ಲಿ, ಗೋಶಾಲೆಯ ಆವರಣದಲ್ಲಿ, ಗೋ ಶಾಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಎಚ್ಚರಿ ಕೆಯ ಬೋರ್ಡ್ ಗಳನ್ನು ಅಳವಡಿಸಲಾಗಿದೆ.
ಪ್ರತಿದಿನ ಚಿರತೆಯ ಹೆಜ್ಜೆ ಜಾಡು ಹಿಡಿದು ಗಸ್ತು ಸಂಚಾರ ನಡೆಸುತ್ತಿದೆ, ಸಾರ್ವಜನಿಕರ ಜಾನುವಾ ರುಗಳಿಗೆ ಅಪಾಯವಾದಲ್ಲಿ ಅರಣ್ಯ ಇಲಾಖೆ ವತಿಯಿಂದ ಪಶು ವೈದ್ಯಧಿಕಾರಿಗಳನ್ನು ಕರಿಸಿ, ಸ್ಥಳ ಪರಿಶೀಲನೆ ಮಾಡಿಸಿ, ಸ್ಥಳದಲ್ಲಿ ಮೃತ ಪಟ್ಟ ಜಾನುವಾರುಗಳ ಸಾವಿನ ಕುರಿತು ಪಶು ವೈದ್ಯರಿಂದ ವರಧಿ ಪಡೆದು ಮೃತ ಜಾನುವಾರು ಗಳ ಫಲಾನುಭವಿಗಳ ಖಾತೆಗೆ ಪರಿಹಾರ ಒದಗಿಸುವ ವ್ಯವಸ್ಥೆ ಅರಣ್ಯ ಇಲಾಖೆಯಲ್ಲಿದೆ.
ಡ್ರೋನ್ ಕ್ಯಾಮರಾ ಮೂಲಕ ಗೋಶಾಲೆ ಗುಡ್ಡಗಾಡು ಪ್ರದೇಶದಲ್ಲಿ ಸುತ್ತಲೂ ವೀಕ್ಷಣೆ ಮಾಡಲಾಗುತ್ತಿದೆ.ಗ್ರಾಮದ ಜನರು ಮುನ್ನೆಚ್ಚರಿಕೆ ಕ್ರಮ ವಹಿಸಿಕೊಳ್ಳಬೇಕು, ಅರಣ್ಯ ಇಲಾಖೆಗೆ ಸಹಕರಿಸಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.