ರಾಯಚೂರು,ಡಿ.೧೯- ಮಾನವಿ ಪಟ್ಟಣದ ಬಿಸಿಎಂ ಹಾಸ್ಟೇಲ್ ಬಾಡಿಗೆ ಹಣ ಪಾವತಿಸಲು ೧೫ ಸಾವಿರ ರೂ ಲಂಚ ಪಡೆಯಿತ್ತಿದ್ದಾಗ ಬಿಸಿಎಂ ಕಲ್ಯಾಣಾಧಿಕಾರಿ ಸಂಗಬಸ್ಸಪ್ಪ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಬುಧವಾರ ಸಂಜೆ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಎಸ್ ಪಿ ಶಶಿಕುಮಾರ ನೇತೃತ್ವದ ತಂಡ ಧಾಳಿ ನಡೆಸಿ ಬಂಧಿಸಿದೆ.
ಮಾನವಿ ನಿವಾಸಿ ತಿಪ್ಪಣ್ಣ ಶೆಟ್ಟಿ ಎಂಬುವವರಿಗೆ ಸೇರಿದ ಕಟ್ಟಡ ಬಿಸಿಎಂ ಬಾಲಕಿಯರ ವಸತಿ ನಿಲಯಕ್ಕೆ ಬಾಡಿಗೆ ನೀಡಲಾಗಿತ್ತು. ಕಳೆದ ೧೧ ತಿಂಗಳ ಬಾಡಿಗೆ ಬಾಕಿಯಿದ್ದು, ೭ ತಿಂಗಳ ಬಾಡಿಗೆ ೪೩ ಸಾವಿರ ರೂ ಬಿಡುಗಡೆಯಾಗಿತ್ತು. ಬಾಡಿಗೆ ಹಣ ನೀಡಲು ಶೇ.೧೫ ರಷ್ಟು ಹಣ ನೀಡಿದರೆ ಹಣ ನೀಡುವದಾಗಿ ಸಂಗಬಸ್ಸಪ್ಪ ಹೇಳಿದ್ದರು. ೧೫ ಸಾವಿರ ರೂ ಹಣ ನೀಡಲು ಒಪ್ಪಿದ್ದರಿಂದ ಬುಧವಾರ ಹಣ ನೀಡುವಾಗ ಲೋಕಾಯುಕ್ತರ ಬಲೆಗೆ ಸಿಲುಕಿದ್ದಾನೆ. ಆರೋಪಿಯನ್ನು ಹಣದೊಂದಿಗೆ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.ಧಾಳಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಾದ ಇನ್ಸಪೆಕ್ಟರ ಕಳಕಪ್ಪ ಬಡಿಗೇರ, ರವಿ,ಪುರುಷೋತ್ಮ ಇದ್ದರು.