ರಾಯಚೂರು- ನಗರದದ ತೀನ ಖಂದೀಲ್ ವೃತ್ತದ ಬಳಿ ಮಾರಾಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ರವಿವಾರ ರಾತ್ರಿ ನಡೆದಿದೆ.
ಸಮೀರ ಎಂಬ ಯುವಕನನ್ನು ಅಮೀನ ಎಂಬಾತ ಹೊಡೆದು ಕೊಲೆಮಾಡಿದ್ದಾನೆ ಎಂದು ಹೇಳಲಾಗಿದೆ. ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.ಹಳೇ ದ್ವೇಷದಿಂದ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.ಸದರ ಬಜಾರ ಠಾಣೆ ಪಿಐ ಉಮೇಶ ಕಾಂಬ್ಳೆ ಬೇಟಿ ನೀಡಿ ಪರಿಶೀಲಿಸಿದ್ದಾರೆ. ತನಿಖೆ ಪ್ರಾರಂಭವಾಗಿದೆ.