ರಾಯಚೂರು:ಸಾರ್ವತ್ರಿಕ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ರಾಯಚೂರು ತಾಲೂಕಿನ ಕರ್ನಾಟಕ ಮತ್ತು ತೆಲಂಗಾಣ ಗಡಿಭಾಗದಲ್ಲಿ ಸ್ಥಾಪಸಿರುವ ಪೋಲಿಸ್ ತಪಾಸಣೆ ಕೇಂದ್ರ ಶಕ್ತಿನಗರ ಚೆಕ್ ಪೋಸ್ಟ್ ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಾನ್ಯ ಶ್ರೀ ಪಾಂಡ್ವೆ ರಾಹುಲ್ ತುಕಾರಾಮ ಅವರು ಭೇಟಿ ನೀಡಿ ಪರಿಶೀಲಿಸಿದರು.
06-ರಾಯಚೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಕರ್ನಾಟಕ ಮತ್ತು ತೆಲಂಗಾಣ ಗಡಿಭಾಗದಲ್ಲಿ ಸ್ಥಾಪಸಿರುವ ಪೋಲಿಸ್ ತಪಾಸಣೆ ಕೇಂದ್ರ, ಶಕ್ತಿನಗರದ ಸ್ಥಾಯೀ ಕಣ್ಗಾವಲು ತಂಡಗಳ ಚೆಕ್ ಪೋಸ್ಟ ಗೆ ಅನೀರಿಕ್ಷಿತ ಭೇಟಿ ನೀಡಿ ಒಳ ಮತ್ತು ಅಂತರ ರಾಜ್ಯ ವಾಹನಗಳನ್ನು ಪರಿಶೀಲಿಸಿ, ಸದರಿ ಚೆಕ್ ಪೋಸ್ಟ್ನ ಮೂಲಕ ಸಂಚರಿಸಿದ ಹಾಗೂ ತಪಾಸಣೆ ಕೈಗೊಂಡ ವಾಹನಗಳ ಮಾಹಿತಿಯನ್ನು ದಾಖಲಿಸಿದ ವಹಿಗಳ ಪರಿಶೀಲನೆ ನಡೆಸಿದರು. ತದನಂತರ ಅಕ್ರಮಗಾಗಿ ಹಣ ಮಧ್ಯ ಸಾಗಾಣಿಕೆ ಮಾಡುವುದರ ಸಾಧ್ಯತೆ ಇರುವುದರಿಂದ ಎಲ್ಲಾ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಿ ಬಿಡಬೇಕೆಂದು ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿಗಳಿಗೆ ಅಗತ್ಯ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಚುನಾವಣೆ ನಿಯೋಜನೆಗೊಂಡ ಸಿಬ್ಬಂದಿ, ಪೊಲೀಸರು ಇದ್ದರು.