ರಾಯಚೂರು. ಬೀದಿ ನಾಯಿ ಕಡಿತಕ್ಕೆ 4 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೊರವಿಹಾಳ ಗ್ರಾಮದಲ್ಲಿ ನಡೆದಿದೆ. ಕೊರವಿಹಾಳ ಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆ 7 ಮಕ್ಕಳ ಮೇಲೆ ಬೀದಿ ನಾಯಿ ದಾಳಿ ಮಾಡಿತ್ತು.
ದಾಳಿಯಿಂದಾಗಿ ಲಾವಣ್ಯ ಎನ್ನುವ (4) ವರ್ಷದ ಬಾಲಕಿಗೆ ನಾಯಿ ಕಡಿದಿದ್ದು, ಇದೀಗ ಮಗು ಸಾವನಪ್ಪಿದೆ, ಮೃತ ಬಾಲಕಿ ಕೀರಲಿಂಗ ಎಂಬು ವರ ಮಗಳು ಎನ್ನಲಾಗಿದೆ.
ಮಗು ಲಾವಣ್ಯ ಇದೇ ಶನಿವಾರದಂದು ಸಾವನ್ನಪ್ಪಿದ್ದಾಳೆ ಎಂದು ತಡವಾಗಿ ಬೆಳಕಿಗೆ ಬಂದಿದೆ.
ಮನೆ ಬಳಿ ಆಟವಾಡುತ್ತಿದ್ದ ಮಗಳ ಮೇಲೆ ಬೀದಿ ಬಾಯಿ ಏಕಾಏಕಿ ದಾಳಿ ನಡೆಸಿದ್ದವು, ಈ ವೇಳೆ ಮೃತ ಲಾವಣ್ಯಳ ಕತ್ತಿನ ಹಿಂಭಾಗದಲ್ಲಿ ನಾಯಿ ಕಚ್ಚಿತ್ತು. ನಾಯಿ ದಾಳಿಯಿಂದ ತೀವ್ರ ರಕ್ತಸ್ರಾವ ಕ್ಕೊಳಗಾಗಿದ್ದಳು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಾವಣ್ಯ ಸಾವನ್ನಪ್ಪಿದ್ದಾಳೆ.
ನಾಯಿ ಕಡಿತಕ್ಕೆ ಒಳಗಾದ ಉಳಿದ ಮಕ್ಕಳ ಪೋಷಕರಲ್ಲಿ ಆತಂಕ ಮೂಡಿದೆ. ಘಟನೆ ಬಳಿಕ ನಾಯಿ ಕಡಿತಕ್ಕೆ ಒಳಗಾಗಿದ್ದ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಘಟನೆ ಬಳಿಕ ಬೀದಿ ನಾಯಿಯನ್ನು ಗ್ರಾಮಸ್ಥರು ಸಾಯಿಸಿದ್ದಾರೆ. ಇತ್ತ ಬೀದಿ ನಾಯಿಯಿಂದ ಅವಾಂತರ ಸೃಷ್ಟಿಯಾದರೂ ಅಧಿಕಾರಿಗಳು ಡೋಂಟ್ ಕೇರ್. ಗಾಯಾಳು ಮಕ್ಕಳಿಗೆ ಪರಿಹಾರ, ಚಿಕಿತ್ಸಾ ವೆಚ್ಚವನ್ನು ಭರಿಸದೇ ಸಗಮಕುಂಟಾ ಪಂಚಾಯಿತಿ ನಿರ್ಲಕ್ಷ್ಯ ಮಾಡಿದೆ. ಮೃತ ಲಾವಣ್ಯ ಕುಟುಂಬಕ್ಕೆ ಪರಿಹಾರ ನೀಡಿಲ್ಲ, ಸೌಜನ್ಯಕ್ಕೆ ಸಾಂತ್ವನ ಹೇಳಿಲ್ಲ ಎಂದು ಜನ ಪ್ರತಿನಿಧಿಗಳು, ಅಧಿಕಾರಿಗಳು ಒತ್ತಾಯಿಸಿದ್ದಾರೆ.