ರಾಯಚೂರು. ನಗರದ ದರವೇಶ ಗ್ರೂಪ್ ಕಾನ್ಸಪೆಕ್ಟ ಟೂ ಕ್ರಿಯೇಷನ್‌ನಿಂದ ಸಾರ್ವಜನಿಕರಿಂದ ಹೆಚ್ಚಿನ ಬಡ್ಡಿ ನೀಡುವದಾಗಿ ನಂಬಿಸಿ ವಂಚಿಸಿರುವ ಪ್ರಕರಣದ ಕುರಿತಂತೆ ಸಿಐಡಿ ತನಿಖೆ ಪ್ರಾರಂಭವಾಗಿದ್ದು ಸಿಐಡಿ ಎಸ್‌ಪಿ ಪುರುಷೋತ್ತಮ ನೇತೃತ್ವ ತಂಡ ನಗರಕ್ಕೆ ಆಗಮಿಸಿ ವಿಚಾರಣೆ ಪ್ರಾರಂಭಿಸಿದೆ.
ದರವೇಶ ಗ್ರೂಪ್‌ನಿಂದ ಸಂಗ್ರಹಿಸಲಾಗಿರುವ ಹಣದಿಂದ ವಂಚನೆಗೆ ಒಳಗಾಗಿರುವ ಜನರು ಕಳೆದ ಕೆಲ ದಿನಗಳಿಂದ ಆತಂಕಕ್ಕೆ ಗುರಿಯಾಗಿದ್ದರು. ಪ್ರಕರಣದ ಕುರಿತಂದೆ ಸೈಬರ್ ಕ್ರೆöÊಂ ವಿಭಾಗದಲ್ಲಿ ದೂರು ದಾಖಲಾಗಿದೆ. ಇತ್ತೀಚಿಗೆ ನಡೆದ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ ವಿಷಯ ಪ್ರಸ್ತಾಪಿಸಿದ್ದು, ಕೃಷಿ ಸಚಿವ ಕೃಷ್ಣ ಬೈರೆಗೌಡ ಪ್ರಕರಣವನ್ನು ಸಿಐಡಿಗೆವಹಿಸಿರುವದಾಗಿ ಹೇಳಿದ್ದರು. ಪ್ರಕರಣದ ವಿಚಾರಣೆಗೆ ಆಗಮಿಸಿರುವ ಐದು ಜನರ ತಂಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪುಟ್ಟ ಮಾದಯ್ಯ ಇವರಿಗೆ ಬೇಟಿ ಮಾಡಿ ಪ್ರಕರಣದ ಮಾಹಿತಿ ಪಡೆದಿದ್ದಾರೆ ಎಂದು ಹೇಳಲಾಗಿದೆ. ಜಿಲ್ಲಾಪೊಲೀಸ್ ವರಿಷ್ಟಾಧಿಕಾರಿಗಳು ದಾಖಲಾಗಿರುವ ದೂರುಗಳು ಹಾಗೂ ಇಲ್ಲಿಯವರಗೆ ನಡೆದಿರುವ ಘಟನೆ ಕುರಿತು ಮಾಹಿತಿಯನ್ನು ಸಿಐಡಿ ತಂಡಕ್ಕೆ ಹಸ್ತಾಂತರಿಸಿದ್ದಾರೆ ಎಂದು ಹೇಳಲಾಗಿದೆ.
ಹೂಡಿಕೆದಾರರಿಗೆ ಹಣ ನೀಡುವದಾಗಿ ಕಂಪನಿ ಮಹ್ಮದ ಸೂಜಾ ವಿಡಿಯೋಗಳ ಮೂಲಕ ಜನರನ್ನು ನಂಬಿಸುವ ಪ್ರಯತ್ನ ನಡೆಸಿದ್ದರು. ಆದರೆ ಹೂಡಿಕೆ ಮಾಡಿದ ಜನರು ನಂಬಿಕೆ ಕಳೆದುಕೊಂಡು ಕಚೇರಿಯನ್ನು ದ್ವಂಸಗೊಳಿಸಿದ ಘಟನೆಯೂ ನಡೆದಿತ್ತು. ಈ ಕುರಿತು ಮಾರ್ಕೆಟ್ ಯಾಡ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ರಾಯಚೂರು ಸೇರಿದಂತೆ ಜಿಲ್ಲೆ ಹಾಗೂ ಇತರೆ ಜಿಲ್ಲೆಗಳಲ್ಲಿಯೂ ಶಾಖೆಗಳನ್ನು ತೆಗೆದು ಎಜೆಂಟ್‌ರ ಮೂಲಕ ಜನರು ಹಣ ಹೂಡಿಕೆ ಮಾಡುವಂತೆ ನಂಬಿಸಲಾಗಿತ್ತು. ಬಹುಕೋಟಿ ಹಣ ಹೂಡಿಕೆಯಾಗಿರುವ ಆರೋಪ ಕೇಳಿಬಂದಿದೆ. ಮನೆ, ಚಿನ್ನಾಭರಣೆ ಮಾರಾಟ ಮಾಡಿ, ನಿವೃತ್ತಿ ಹಣವನ್ನು ಸಹ ಅನೇಕರು ಹೂಡಿಕೆ ಮಾಡಿ ಆತಂಕಕ್ಕೆ ಗುರಿಯಾಗಿದ್ದರು. ಇಷ್ಟೊಂದು ದೊಡ್ಡ ಮಟ್ಟದ ಆರ್ಥಿಕ ವಂಚನೆ ಪ್ರಕರಣಗಂಬೀರತೆ ಪಡೆಯದೇ ಹೋಗಿತ್ತು. ಆದರೀಗ ಸಿಐಡಿ ತನಿಖೆ ಚುರುಕುಗೊಂಡಿದ್ದು ಆತಂಕದಲ್ಲಿರುವ ಜನರಿಗೆ ಹಣ ಮರಳಿಸುವ ಕೆಲಸ ನಡೆಬೇಕೆನ್ನುವದು ಜನರು ಒತ್ತಾಯ. ಹೂಡಿಕೆ ಮಾಡಿರುವ ಜನರಿಗೆ ಕಂಪನಿಯ ಮಾಲೀಕರು ಖಾತ್ರಿ ನೀಡುತ್ತಿಲ್ಲ. ಪ್ರಾರಂಭದಲ್ಲಿ ಹಣ ಹೂಡಿಕೆ ಮಾಡಿರುವರಿಗೆ ಹೊಂದಾಣಿಕೆ ಮಾಡುವದಾಗಿ ಹೇಳಲಾಗುತ್ತಿದೆ. ಪೊಲೀಸ್ ಠಾಣೆಯಲ್ಲಿ ನಾಲ್ಕು ಜನರ ವಿರುದ್ದ ದಾಖಲಾದ ದೂರಿನ ಮೇರೆಗೆ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿರುವಾಗಲೇ ಸಿಐಡಿ ತಂಡ ಪ್ರವೇಶ ಪಡೆದಿದೆ. ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಕಂಪನಿ ಕಚೇರಿ ಹಾಗೂ ಎಜೆಂಟ್ ವಿಚಾರಣೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.