ರಾಯಚೂರು. ದರ್ವೇಶ್ ಗ್ರೂಪ್ ಕಂಪನಿ ಯಿಂದ ಬಹುಕೋಟಿ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ರವಿಕುಮಾರ ಅವರು ವಂಚನೆ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯಿಸಿದ ಬಳಿಕ ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು ಅವರು ಉತ್ತರಿಸಿ ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ದರ್ವೇಶ್ ಗ್ರೂಪ್ ಕಂಪನಿ ಮಾಲೀಕ ನಾಪತ್ತೆಯಾಗಿದ್ದಾನೆ, ಈ ಕುರಿತು ರಾಯಚೂರಿನಲ್ಲಿ ಹಣ ಹೂಡಿಕೆ ಮಾಡಿದ ಜನರು ಗಲಾಟೆ ನಡೆಸಿದ ಘಟನೆಗಳು ನಡೆದಿವೆ.
ಈ ಹಿನ್ನಲೆ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.
ಈ ಪ್ರಕರಣ ಹಿಂದೆ ಸಿಇಎನ್ ಠಾಣೆಯ ಲ್ಲಿ ವಂಚನೆ ಆರೋಪ ಕುರಿತು ದಾಖಲಾಗಿತ್ತು. ಇದೀಗ ಪ್ರಕರಣ ಸಿಐಡಿಗೆ ವರ್ಗಾವಣೆ ಹಿನ್ನೆಲೆ ಶೀಘ್ರದಲ್ಲೇ ಸಿಐಡಿ ತಂಡ ರಾಯಚೂರಿಗೆ ಭೇಟಿ ನೀಡಲಿದ್ದಾರೆ. ಪ್ರಕರಣದ ತನಿಖಾ ವರದಿ, ಹೂಡಿಕೆದಾರರ ಹಾಗೂ ಕಂಪನಿ ಮಾಲೀಕರ ಮಾಹಿತಿಯನ್ನು ರಾಯಚೂರು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳಿಂದ ಸಿಐಡಿ ಪಡೆಯಲಿದೆ.