ರಾಯಚೂರು.ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಬೀದಿ ನಾಯಿಗಳ ದಾಳಿಗೆ ಯುವತಿ ಮೃತಪಟ್ಟ ನಂತರ ನಗರಸಭೆಯು ಎಚ್ಚೆತ್ತು ಕೊಂಡು ನಾಯಿಗಳನ್ನು ಸೆರೆ ಹಿಡಿಯಲು ಮುಂದಾಗಿದೆ.
ನಗರದ ಮಡ್ಡಿಪೇಟೆಯಲ್ಲಿ ಮಹಾದೇವಿ ( 20) ಬೀದಿ ನಾಯಿಗಳ ದಾಳಿಯಿಂದ ಮೃತಪಟ್ಟರು ಯುವತಿಯಾಗಿದ್ದಾಳೆ.
ಮನೆಯ ಮುಂದೆ ಬೀದಿ ನಾಯಿಗಳ ದಾಳಿಯಿಂ ದತಲೆಗೆ ತೀವ್ರ ಪೆಟ್ಟಾಗಿ ಕೋಮಾ ಸ್ಥಿತಿಗೆ ತಲು ಪಿದ್ದ ಯುವತಿ ಸಾವು ಬದುಕಿನ ಮಧ್ಯ ಹೋರಾಡಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಕಳೆದ ಒಂದು ವಾರದಿಂದ ಬೀದಿ ನಾಯಿಗಳು ದಾಳಿ ನಡೆಸಿವೆ, ದಾಳಿ ಬಳಿಕ ನಗರಸಭೆಯು ಎಚ್ಚೆತ್ತುಕೊಂಡಿಲ್ಲ, ದಾಳಿಯಿಂದ ಯುವತಿ ಮೃತಪಟ್ಟಿದ್ದರಿಂದ ಸಾರ್ವಜನಿಕರು ರೊಚ್ಚಿಗೇಳುತ್ತಾರೆ ಎಂದು ನಗರಸಭೆಯು ಇದೀಗ ಬೀದಿನಾಯಿಗಳನ್ನು ಸೆರೆ ಹಿಡಿಯಲು ಮುಂದಾಗಿದೆ.
ಈ ಹಿಂದೆಯೂ ಸಹ ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ್ದವು ಆವಾಗಲು ಸಹ ದಾಳಿ ಬಳಿಕ ಎಚ್ಚೆತ್ತುಕೊಂಡು ನಾಯಿಗಳ ಸೆರೆ ಹಿಡಿಯಲಾಗಿತ್ತು, ದಾಳಿ ಮಾಡದ ಬಳಿಕ ನಗರಸಭೆ ಎಚ್ಚರಿಕೆ ವಹಿಸುತ್ತಿದೆ ವಿನಹಃ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ.
ಸಾರ್ವಜನಿಕರು ಸಂಘ ಸಂಸ್ಥೆಗಳು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನಗರಸಭೆಯು ನಾಯಿಗಳ ದಾಳಿಯಿಂದ ಮೃತಪಟ್ಟ ಮೇಲೆ ಎಚ್ಚೆತ್ತುಕೊಂಡಿದೆ. ನಗರಸಭೆಗೆ ಕೆಟ್ಟ ಮೇಲೆ ಬುದ್ದಿ ಬಂದಂತಾಗಿದೆ.