ಸಿರವಾರ: ಪೌರ ಕಾರ್ಮಿಕನೋರ್ವ ಕರ್ತವ್ಯದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಸಂಬವಿಸಿದೆ.
ಪೌರಕಾರ್ಮಿಕ ತಿಮ್ಮಪ್ಪ ಅಸ್ಕಿಹಾಳ (36) ಮೃತಪಟ್ಟವರಾಗಿದ್ದಾರೆ.
ಸಿರವಾರ ಪಟ್ಟಣ ಪಂಚಾಯತ್ ನಲ್ಲಿ ಪೌರಕಾರ್ಮಿಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ.
ಪಟ್ಟಣದ ಬಸವ ವೃತ್ತದಲ್ಲಿ ಕರ್ತವ್ಯಕ್ಕೆ ಹಾಜ ರಾಗಿದ್ದ ಕುಳಿತಿದ್ದ ಸ್ಥಳದಲ್ಲಿಯೇ ಹೃದಯಾಘಾ ತವಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ತಹಶೀಲ್ದಾರ ರವಿ ಎಸ್. ಅಂಗಡಿ, ಪ.ಪಂ. ಅಧ್ಯಕ್ಷ ವೈ.ಭೂಪನಗೌಡ, ಉಪಾಧ್ಯಕ್ಷೆ ಲಕ್ಷ್ಮೀ ಅದೆಪ್ಪ ಸೇರಿದಂತೆ ಸದಸ್ಯರು, ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಸಂತಾಪ ಸೂಚಿಸಿದರು