ರಾಯಚೂರು. ನ್ಯಾಯ ಪಂಚಾಯತಿ ವಿಚಾರಕ್ಕೆ ಎರಡು ಗುಂಪು ಮಧ್ಯ ಘರ್ಷಣೆ ಉಂಟಾಗಿ ಕಬ್ಬಿಣ ರಾಡ್ ಕಟ್ಟಿಗೆಗಳಿಂದ ಹೊಡೆದಾಡಿಕೊಂ ಡಿದ್ದು, ಮಾರಣಾಂತಿಕ ಹಲ್ಲೆಯಿಂದಾಗಿ ನಾಲ್ಕು ಜನರಿಗೆ ಗಂಭಿರ ಗಾಯಗಳಾಗಿರುವ ಘಟನೆ ನಗರ ಹೊರ ವಲಯದ ಅಸ್ಕಿಹಾಳ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ರೇಷ್ಮಾ, ನರಸಪ್ಪ, ಮನೋಹರ್, ಗಿರಿಜಾ ಸೇರಿ ನಾಲ್ಕು ಜನರಿಗೆ ಗಾಯಗಳಾಗಿದ್ದು,
ಗಾಯಾಳುಗಳನ್ನಯ ನಗರದ ರಿಮ್ಸ್ ಆಸ್ಪತ್ರೆ ಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕಳೆದ ಮೂರು ವರ್ಷಗಳಿಂದ ಎರಡು ಯುವಕರ ಗುಂಪುಗಳ ಮಧ್ಯ ಕಿರಿಕ್ ಉಂಟಾಗಿತ್ತು, ಈ ವಿಚಾರಕ್ಕೆ ನಿನ್ನೆ ರಾತ್ರಿ, ನರಸಪ್ಪ ಎನ್ನುವವರು ನ್ಯಾಯ ಪಂಚಾಯತ್ ಮಾಡಲು ಮುಂದಾಗಿ ದ್ದರು, ನೀವು ನ್ಯಾಯ ಪಂಚಾಯತಿ ಮಾಡೋ ಷ್ಟು ದೊಡ್ಡವರು ಎಂದು ಮಾತಿಗೆ ಮಾತು ಬೆಳೆ ದಿದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕಬ್ಬಿಣ ರಾಡ್ ಮತ್ತು ಕಟ್ಟಿಗೆಗಳಿಂದ ಹೊಡೆದಿದ್ದಾರೆ. ಈ ವೇಳೆ ಬಿಡಿಸಲು ಬಂದವರಿ ಗೂ ಮಹಿಳೆಯರನ್ನದೇ ಎಲ್ಲರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಈ ವೇಳೆ ರೇಷ್ಮಾ, ನರಸಪ್ಪ, ಮನೋ ಹರ್,ಗಿರಿಜಾ ಸೇರಿದಂತೆ ನಾಲ್ಕು ಜನರಿಗೆ ಗಂಭೀರವಾಗಿ ಗಾಯಗೊಂಡಿದ್ದು, ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪಶ್ಚಿಮ ಪೋಲಿಸ್ ಠಾಣೆಯ ಪೋಲಿಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಪ್ರಕರಣ ದಾಖಲಿಸಿಕೊಂಡು ರಂಗಪ್ಪ, ಅನಿಲ್, ಪವನ, ಶೀನು, ತಿಮ್ಮಾ, ಸೇರಿದಂತೆ ಸೇರಿದಂತೆ ಒಟ್ಟು 15 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.