ರಾಯಚೂರು. ಸಿಂಧನೂರು ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವು ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವ ಹಿಸುವ ನಿರೀಕ್ಷಿತ ಇದೆ, ಈ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನಗಳ ದಟ್ಟಣೆ ಉಂಟಾಗು ವುದರಿಂದ ಸಾರ್ವಜನಿಕ ಸಂಚಾರಕ್ಕೆ ಅನಿಕೂಲ ಮಾಡಿಕೊಡಲು ವಾಹನಗಳ ಮಾರ್ಗ ಬದಲಾವಣೆ ಮಾಡಿದ್ದು ಸಾರ್ವಜನಿಕರು ಸಹಕ ರಿಸಬೇಕು ಎಂದು ಜಿಲ್ಲಾ ಪೋಲಿಸ್ ವರಿಷ್ಠಾ ಧಿಕಾರಿ ಬಿ.ನಿಖಿಲ್ ತಿಳಿಸಿದ್ದಾರೆ.
ಸಿಂಧನೂರು ನಗರದಲ್ಲಿ ಹೆಚ್ಚಿನ ವಾಹನ ದಟ್ಟಣೆ ಉಂಟಾಗುವುದರಿಂದ ಸಾರ್ವಜನಿಕರ ಹಾಗೂ ಗಣ್ಯ ವ್ಯಕ್ತಿಗಳ ಸುಗಮ ಸಂಚಾರದ ಸಲುವಾಗಿ ಗಂಗಾವತಿಯಿಂದ ಬರುವ ಭಾರಿ ವಾಹನಗಳನ್ನು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವ ರೆಗೂ ಗೊರೆಬಾಳ ಕ್ಯಾಂಪ್ ಮಾರ್ಗವಾಗಿ ಗಾಂಧಿನಗರ, ಗುಂಜಳ್ಳಿ ಮಾರ್ಗದ ಕಡೆಗೆ ಹಾಗೂ ಮಾನವಿಯಿಂದ ಬರುವ ಭಾರಿ ವಾಹನಗಳು ಜವಳಗೇರಾ ಕ್ರಾಸ್‌ನಿಂದ ದಢೇಸುಗೂರು ಮಾರ್ಗವಾಗಿ ಸಂಚರಿಸಲು ತಿಳಿಸಲಾಗಿದೆ.
ಸಿಂಧನೂರು ನಗರದಲ್ಲಿ ಕಾರ್ಯಕ್ರಮದ ದಿನದಂದು ಜನದಟ್ಟಣೆ ಹೆಚ್ಚಿರುವುದರಿಂದ ದ್ವಿಚಕ್ರ, ಲಘು ವಾಹನಗಳನ್ನು ನಗರದ ಅಂಬೇಡ್ಕರ್ ವೃತ್ತದಿಂದ ಎಮ್.ಜಿ ವೃತ್ತದವರೆಗೆ, ಎಮ್.ಜಿ ವೃತ್ತದಿಂದ ಕುಷ್ಟಗಿ ಮಾರ್ಗ ಎಪಿ ಎಮ್‌ಸಿ ವೃತ್ತದವರೆಗೆ ಯಾವುದೇ ವಾಹನವನ್ನು ರಸ್ತೆಯ ಮೇಲೆ ನಿಲುಗಡೆ ಮಾಡಲು ಅವಕಾಶ ವಿರುವುದಿಲ್ಲ.
ಸಾರ್ವಜನಿಕರಲ್ಲಿ, ಎಪಿಎಮ್‌ಸಿ ಲಾರಿ ಚಾಲ ಕರಲ್ಲಿ, ಮಾಲೀಕರಲ್ಲಿ ಮತ್ತು ಸಿಂಧನೂರು ವರ್ತಕರಲ್ಲಿ ವಾಹನಗಳನ್ನು ರಸ್ತೆಯ ಮೇಲೆ ನಿಲುಗಡೆ ಮಾಡದಂತೆ ಪೊಲೀಸ್ ಇಲಾಖೆ ಯೊಂದಿಗೆ ಸಹಕರಿಸಲು ಕೋರಲಾಗಿದೆ.
ಭದ್ರತೆ ಹಿತದೃಷ್ಟಿಯಿಂದ ಕಾರ್ಯಕ್ರಮಕ್ಕೆ ಆಗಮಿಸುವಂತಹ ಸಾರ್ವಜನಿಕರು, ಕಾಲೇಜ್ ಯುವಕ-ಯುವತಿಯರು ಯಾವುದೇ ನಿಷೇಧಿತ ವಸ್ತುಗಳಾದ ಬೆಂಕಿ ಪಟ್ಟಣ, ಲೈಟರ್, ತಂಬಾಕು, ಗುಟ್ಕಾ, ಬೀಡಿ- ಸಿಗರೇಟ್ ಹಾಗೂ ಇತರೆ ನಿಷೇಧಿತ ವಸ್ತುಗಳನ್ನು ತರದಂತೆ ಸಾರ್ವಜನಿಕರ ಗಮನವನ್ನು ಸೆಳೆಯಲಾಗಿದೆ.
ಎಂದು ತಿಳಿಸಿದ್ದಾರೆ.