ರಾಯಚೂರುಜು.೧೫- ಜಿಲ್ಲೆಯ ಮಾಜಿ ಸಚಿವ ಶಿವನಗೌಡ ನಾಯಕ ಅವರು ನವಿಲು ಗರಿಯಿಂದ ತಯಾರಿಸಿದ ಹಾರವನ್ನು ಸಾರ್ವಜನಿಕವಾಗಿ ಧರಿಸಿ ವೈಭವದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಅವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಮಾಜಿಕ ಕಾರ್ಯಕರ್ತ ದಿನೇಶ ಕಲ್ಲಹಳ್ಳಿ ದೂರು ನೀಡಿದ್ದಾರೆ.
ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ನವಿಲು ಗರಿಯಹಾರ ಹಾಕಿಕೊಂಡಿರುವ ಚಿತ್ತ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿತ್ತು. ರಾಷ್ಟ್ರಪಕ್ಷಿಯಾಗಿರುವ ನವಿಲು ಮಾರಾಟ,ಗರಿಗಳ ಬಳಕೆ ನಿಷೇದವಿದೆ.
ರಾಜ್ಯದಲ್ಲಿಯೂ ಯಾವುದೇ ವಿಧದ ಕಾನೂನುಬದ್ಧ ಅನುಮತಿ ಇಲ್ಲ. ನವಿಲು ಎಂಬುದು ಭಾರತದ ರಾಷ್ಟ್ರೀಯ ಪಕ್ಷಿಯಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಅನೂಷ್ಠಾನ I (Schedule-I) ಅಡಿಯಲ್ಲಿ ಬಂದಿರುತ್ತದೆ. ಈ ಕಾಯ್ದೆಯ ಪ್ರಕಾರ, ನವಿಲು ಅಥವಾ ಅದರ ಯಾವುದೇ ಅಂಗ (ಹಕ್ಕಿ, ಗರಿ, ಚರ್ಮ, ಇತ್ಯಾದಿ) ನೈಜವಾಗಿಯಾದರೂ ಅಥವಾ ಶಿಲ್ಪದ ರೂಪದಲ್ಲಾದರೂ ಸಂಗ್ರಹಿಸುವುದು, ಮಾರಾಟ ಮಾಡುವುದು, ಅಥವಾ ಸಾರ್ವಜನಿಕ ಪ್ರದರ್ಶನಕ್ಕೆ ಉಪಯೋಗಿಸುವುದೆಲ್ಲವೂ ಗಂಭೀರ ಅಪರಾಧವಾಗಿರುತ್ತದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ಸೆಕ್ಷನ್ 49B: ವನ್ಯಜೀವಿಯ ಭಾಗಗಳ ಮಾರಾಟ ಅಥವಾ ವ್ಯಾಪಾರವು ನಿಷಿದ್ಧ. ಯಾವುದೇ ವ್ಯಕ್ತಿ ಅಥವಾ ಅಂಗಡಿ ನವಿಲು ಗರಿಯನ್ನು ಮಾರಾಟ ಮಾಡುತ್ತಿದ್ದರೆ, ಅದು ಸ್ಪಷ್ಟವಾದ ಕಾನೂನು ಉಲ್ಲಂಘನೆಯಾಗಿರುತ್ತದೆ. ಕೂಡಲೇ ಕೇಸ್ ದಾಖಲಿಸಿ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ.