ರಾಯಚೂರು. ಮಾಂಗಳ್ಯ ನೂತನ ಶಾಪಿಂಗ್ ಮಾಲ್ ಮುಂಭಾಗದಲ್ಲಿ ತೆಲುಗು ನಾಮಫಲಕ ಹಾಕಿದನ್ನು ಖಂಡಸಿ ಕರ್ನಾಟಕ ಸೇನೆ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ನೂತನವಾಗಿ ಮಾಂಗಳ್ಯ ಎಂಬ ನೂತನ ಶಾಂಪಿಂಗ್ ಮಾಲ್ ನ್ನು ಉದ್ಘಾಟನೆ ಆರಂಭವಾಗಿದ್ದು, ಆದರೆ ಈ ನೂತನ ಶಾಂಪಿಂಗ್ ಮಾಲ್ ನ ಬೃಹತ್ ದಾದ ನಾಮಫಲಕವನ್ನು ತೆಲುಗು ಭಾಷೆಯಲ್ಲಿ ಹಾಕಲಾಗಿದನ್ನು ಖಂಡಿಸಿದರು. ರಾಜ್ಯದಲ್ಲಿ ಶೇ 60 ರಷ್ಟು ಕನ್ನಡ ಕಡ್ಡಾಯವಿದ್ದು ತೆಲುಗು ನಾಮಫಲಕವನ್ನು ಕೂಡಲೇ ತೆರವುಗೊಳಿ ಸುವಂತೆ ಆಗ್ರಹಿಸಿದರು.
ಒತ್ತಾಯಕ್ಕೆ ಮಣಿದ ಶಾಪಿಂಗ್ ಮಾಲ್‌ನ ಮುಖ್ಯಸ್ಥರು ನಾಮಫಲಕವನ್ನು ತೆರವುಗೊಳಿ ಸಿದರು.
ಶಾಂಪಿಲ್ ಮಾಲ್ ಪ್ರಾರಂಭ ದಿನವೇ ಕನ್ನಡ ವಿರೋಧಿ ನೀತಿಯನ್ನು ತೆಳದಿದ್ದು ಅಲ್ಲದೇ ಬೃಹತ್ ಆಗಿ ನಾಮಫಲಕ ತೆಲುಗಿನಲ್ಲಿ ಹಾಕಿದಕ್ಕೆ ಆಕ್ರೋಶ ಹೊರ ಹಾಕಿದರು. ಮುಂದಿನ ದಿನಗಳ ಲ್ಲಿ ಕನ್ನಡ ವಿರೋಧಿ ನಿಲುವು ತಾಳುತ್ತಿರುವವರಿಗೆ ಎಚ್ಚರಿಕೆ ಸಂದೇಶ ನೀಡಿದರು.