Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ಒಳಮೀಸಲಾತಿ ಜಾರಿ ವಿಳಂಭ ಖಂಡಿಸಿ ಜಿಲ್ಲಾ ಬಂದ್ ಯಶಸ್ವಿ: ಬಸ್, ವ್ಯಾಪಾರ ವಹಿವಾಟು ಸ್ಥಗಿತ

ಒಳಮೀಸಲಾತಿ ಜಾರಿ ವಿಳಂಭ ಖಂಡಿಸಿ ಜಿಲ್ಲಾ ಬಂದ್ ಯಶಸ್ವಿ: ಬಸ್, ವ್ಯಾಪಾರ ವಹಿವಾಟು ಸ್ಥಗಿತ

ರಾಯಚೂರು. ಒಳಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ದಲಿತ ಪರ ಸಂಘಟನೆಗಳು ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಅಂಗಡಿ ಮುಗ್ಗಟ್ಟುಗಳು, ಸಾರಿಗೆ ಮತ್ತು ಪೆಟ್ರೋಲ್ ಬಂಕ್ ಬಂದ್ ಆಗಿದ್ದವು.

ರಾಯಚೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್‌ಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು ಇದರಿಂದಾಗಿ ಪ್ರಯಾಣಿಕರು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ, ನಗರದಲ್ಲಿ ಎಂದಿನಂತೆ ಆಟೋ ಮತ್ತು ಟ್ಯಾಕ್ಸಿ ವಾಹನಗಳ ಸಂಚಾರ ಆರಂಭವಾಗಿತ್ತು, ಬಸ್ ಬಂದ್ ಹಿನ್ನೆಲೆಯಲ್ಲಿ ಪ್ರಯಾಣಿಕರು, ಆಟೋ ಮತ್ತು ಟ್ಯಾಕ್ಸಿ ವಾಹನಗಳಲ್ಲಿ ತೆರಳಿದರು, ಬಸ್ ಇಲ್ಲದೆ ಇರುವುದರಿಂದ ಆಟೋ ಮತ್ತು ಟ್ಯಾಕ್ಸಿ ವಾಹನಗಳು ಪ್ರಯಾಣಕ್ಕೆ ಪ್ರಯಾಣಿಕರಿಂದ ದುಬಾರಿ ಹಣ ಪಡೆಯುತ್ತಿರುವುದು ಕಂಡು ಬಂತು. ಟ್ಯಾಕ್ಸಿ ಮತ್ತು ಆಟೋಗಳು ಬಂದ್ ನೆಪ ಮಾಡಿಕೊಂಡು ಪ್ರಯಾಣಿಕರಿಂದ ಹೆಚ್ಚುವರಿ ಹಣ ಪಡೆಯುತ್ತಿದ್ದು, ಈ ವೇಳೆ ಪ್ರಯಾಣಿಕರು ವಿರೋಧ ವ್ಯಕ್ತಪಡಿಸಿದ ಘಟನೆ ನಡೆಯಿತು..
ನಗರದಲ್ಲಿ ವ್ಯಾಪಾರ ಅಂಗಡಿ ಮುಗ್ಗಟ್ಟುಗಳು ಸಹ ಸಂಪೂರ್ಣ ಬಂದ್ ಮಾಡಲಾಗಿತ್ತು. ಬಟ್ಟೆ ಅಂಗಡಿ, ಕಿರಾಣಿ ಅಂಗಡಿ, ಶಾಪಿಂಗ್ ಮಾಲ್, ಹೋಟೆಲ್‌ಗಳು, ಬಾರ್ ಮತ್ತು ರೆಸ್ಟೋರೆಂಟ್ ಗಳು, ಪೆಟ್ರೋಲ್ ಬಂಕ್‌ಗಳು ಸಂಪೂರ್ಣ ಬಂದ್ ಆಗಿದ್ದವು. ತರಕಾರಿ ಮಾರುಕಟ್ಟೆ,ಎಪಿಎಂಸಿ ಸಹ ವ್ಯಾಪಾರ ನಡೆಸಲಿಲ್ಲ.
ನಗರದಲ್ಲಿ ವಾಹನಗಳ ಸಂಚಾರವು ಎಂದಿನಂತಿರದೆ ರಸ್ತೆಯಲ್ಲಿ ವಾಹನಗಳ ಸಂಚಾರ ಇಳಿಮುಖವಾಗಿತ್ತು, ಬಂದ್ ಕರೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದAತೆ ಶಾಲಾ ಕಾಲೇಜುಗಳು ಸಹ ಬಂದ್ ಮಾಡಲಾಗಿತ್ತು,
ಎಪಿಎಂಸಿ ಮಾರುಕಟ್ಟೆಯಲ್ಲಿಯೂ ಕೃಷಿ ಉತ್ಪನ್ನಗಳ ಮಾರಾಟ ಖರೀದಿ ಬಂದ್ ಆಗಿತ್ತು, ರೈತರು ಹತ್ತಿ ಮಾರಾಟ ಮಾಡಲು ಬಂದಿದ್ದ ರಿಂದ ಕೊಂಚ ತೊಂದರೆ ಅನುಭವಿಸುವಂತಾಗಿದೆ.
ದಸರಾ ಹಬ್ಬದ ಹಿನ್ನೆಲೆಯಲ್ಲಿ ಮೊದಲ ದಿನವಾದ ಇಂದು ನವರಾತ್ರಿ ಆಚರಣೆ ಮಾಡುವವರಿಗೆ ಮಾರುಕಟ್ಟೆ ಬಂದ್ ಆಗಿದ್ದ ರಿಂದ ಪೂಜೆಗೆ ಬೇಕಾದ ವಸ್ತುಗಳ ಖರೀದಿಗೆ ಮೊದಲ ದಿನ ಬಂದ್ ಬಿಸಿ ತಟ್ಟಿದೆ.
ರಾಯಚೂರು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿಯೂ ಸಹ ಬಂದ್ ನಡೆಯಿತು.

Megha News