Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ಕಾಂಗ್ರೆಸ್‌ನವರು ಅತಿಹೆಚ್ಚು ಸ್ಥಾನಪಡಿಯುವ ಭ್ರಮೆಯಲ್ಲಿದ್ದಾರೆ-ಶಾಸಕ ಜನಾರ್ಧನರೆಡ್ಡಿ

ಕಾಂಗ್ರೆಸ್‌ನವರು ಅತಿಹೆಚ್ಚು ಸ್ಥಾನಪಡಿಯುವ ಭ್ರಮೆಯಲ್ಲಿದ್ದಾರೆ-ಶಾಸಕ ಜನಾರ್ಧನರೆಡ್ಡಿ

ರಾಯಚೂರು. ಕಾಂಗ್ರೆಸ್‌ನವರು ಅತಿಹೆಚ್ಚು ಸ್ಥಾನಪಡಿಯಯವ ಭ್ರಮೆಯಲ್ಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಗೆದ್ರೆ ಸಾಕು ಅಂತಿದಾರೆ. ಡಿ.ಕೆ.ಶಿವುಕುಮಾರ ತಮ್ಮ ಸುರೇಶ ಗೆದ್ದರೆ ಸಾಕು ಎನ್ನುತ್ತಿದ್ದಾರೆ. ಜನರು ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಕಾಂಗ್ರೆಸ್‌ನವರೇ ಮೋದಿ ಮೋದಿ ಅನ್ನುತ್ತಿದ್ದಾರೆ ಎಂದು ಗಂಗಾವತಿ ಶಾಸಕ ಜನಾರ್ಧನರೆಡ್ಡಿ ಹೇಳಿದರು.

ಬಿಜೆಪಿ ಪಕ್ಷದ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಸಲು ಆಯೋಜಿಸ ಲಾಗಿದ್ದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಪಕ್ಷದ ಅಭ್ಯರ್ಥಿಗಳು ಜಯಸಾಧಿಸಿದರೆ ನರೇಂದ್ರ ಮೋದಿ ಕೈ ಬಲಪಡಿಸಿದಂತೆ. ಪಕ್ಷದ ಅಭ್ಯರ್ಥಿ ರಾಜಾ ಅಮರೇಶ್ವರನಾಯಕ ಮಿತಭಾಷಿಯಾಗಿ ಅಭಿವೃದ್ದಿಪರವಾಗಿ ಕಾರ್ಯನಿರ್ವಹಿಸುವರಾಗಿದ್ದಾರೆ ಎಂದರು. ರಾಯಚೂರು ಅಭಿವೃದ್ಧಿಗೆ ಏಮ್ಸ್ ಬರಬೇಕು ಅಂದ್ರೆ ಅಮರೇಶ್ವರ ನಾಯಕ ಅವರನ್ನು ಗೆಲ್ಲಿಸಿ, ಎಲ್ಲಾ ನಾಯಕರು ಸೇರಿ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದರು.

Megha News