ರಾಯಚೂರು. ಅಡುಗೆ ಅನಿಲ ಬಳಕೆ ಮಾಡುತ್ತಿ ರುವ ಗ್ರಾಹಕರಿಗೆ ಇಕೆವೈಸಿ ಕಡ್ಡಾಯಗೊಳಿಸಿದೆ, ಒಂದಕ್ಕಿಂತ ಹೆಚ್ಚು ಅನಿಲ ಸಂಪರ್ಕ ಪಡೆದಿ ರುವುದು ಸೇರಿದಂತೆ ಗೃಹ ಬಳಕೆ ಸಿಲಿಂಡರ್ ಸಂಪರ್ಕ ದುರ್ಬಳಕೆಯಾಗುವುದನ್ನು ತಪ್ಪಿಸಲು ತೈಲ ಕಂಪನಿಗಳು, ಗ್ರಾಹಕರ ಕೆವೈಸಿ ಅಪ್‌ಡೇಟ್ ಮಾಡುವಂತೆ ಗ್ಯಾಸ್ ಏಜೆನ್ಸಿಗಳಿಗೆ ಸೂಚನೆ ನೀಡಿವೆ. ಮೊಬೈಲ್ ಒಟಿಪಿ ಮೂಲಕ ಕೆವೈಸಿ ಪಡೆಯುವ ಬದಲು ನಿಜವಾದ ಗ್ರಾಹಕರು ಯಾರಿದ್ದಾರೆ ಎಂಬುದನ್ನು ನಿಖರವಾಗಿ ತಿಳಿ ಯಲು ಇದನ್ನು ಕಡ್ಡಾಯಗೊಳಿಸಿದೆ.
ಗ್ಯಾಸ್ ಏಜೆನ್ಸಿಗಳು ತಮ್ಮ ಕಚೇರಿಯಲ್ಲಿ ಗ್ರಾಹಕರ ಕೆವೈಸಿ ಮಾಡಿಸಬೇಕಾಗಿದೆ, ಆದರೆ ಕಚೇರಿಯಲ್ಲಿ ಮಾಡದೇ ಹೊರಗಡೆ ಮಾಡುತ್ತಿದ್ದು, ಇದರಿಂದಾಗಿ ಗ್ರಾಹಕರಿಗೆ ಸಾಕಷ್ಟು ತೊಂದರೆ ಉಂಟಾಗಿದೆ.
ನಗರದ ಲಕ್ಷ್ಮಿ ವೆಂಕಟೇಶ್ವರ ಇಂಡಿಯನ್ ಗ್ಯಾಸ್ ಏಜೆನ್ಸಿಯಲ್ಲಿ ತಮ್ಮ ಕಚೇರಿಯಲ್ಲಿಯೇ ಇಕೆವೈಸಿ ಮಾಡಿಸಬೇಕು, ಆದರೆ ಗ್ರಾಹಕರ ಹೆಚ್ಚಿನ ಸಂಖ್ಯೆಯಲ್ಲಿ ಏಜೆನ್ಸಿಗೆ ಬಂದಿದ್ದರಿಂದ ನಿಯಂತ್ರಣ ಮಾಡಲು ಆಗದೇ ಇರುವುದರಿಂದ ಹತ್ತರವಿದ್ದ ನಿರ್ಮಾಣ ಹಂತದ ಕಟ್ಟಡ ಹೊರಗಡೆ ನಿಲ್ಲಿಸಿಕೊಂಡು ಮಾಡುತ್ತಿದ್ದು, ಇದರಿಂದ ಗ್ರಾಹಕರಿಗೆ ತೊಂದರೆಯಾಗಿದೆ.
ಕಚೇರಿಯಲ್ಲಿಯೇ ವ್ಯವಸ್ಥಿತವಾಗಿ ಇಕೆವೈಸಿ ಮಾಡಿಸಬೇಕು ಬದಲಾಗಿ ಎಲ್ಲೆಂದರಲ್ಲಿ ಗ್ರಾಹಕರನ್ನು ಸೇರಿಸಿ ಇಕೆವೈಸಿ ಮಾಡಿಸುತ್ತಿದ್ದು ಇದರಿಂದ ಗ್ರಾಹಕರ ಸಮಸ್ಯೆಗೆ ಸಲುಕಿದ್ದಾರೆ.
ಬ್ಯಾಂಕ್ ಗಳಲ್ಲಿ, ಹಾಗೂ ರೈತರು ಕಿಸಾನ್ ಯೋಜನೆಯ ಅನುದಾನ ಪಡೆಯಲು ಇಕೆವೈಸಿ ಕಡ್ಡಾಯ ಗೊಳಿಸಿತ್ತು, ಇದೀಗ ಗ್ಯಾಸ್ ಪಡೆಯಲು ಇಕೆವೈಸಿ ಮಾಡಿಸುತ್ತಿದ್ದಾರೆ,
ಗ್ರಾಹಕರ ಬೆರಳು ಗುರುತು ಮತ್ತು ಮುಖ ಚಹರೆಯನ್ನು ಮಾತ್ರ ಪರಿಗಣಿಸಿ ಇಕೆವೈಸಿ ಅಪ್‌ಡೇಟ್ ಮಾಡಬೇಕೆಂದು ಕೇಂದ್ರ ಸರಕಾರದ ಪೆಟ್ರೋಲಿಯಂ ಸಚಿವಾಲಯ, ತೈಲ ಕಂಪನಿಗಳಿಗೆ ಎರಡು ವಾರದ ಹಿಂದೆ ಆದೇಶ ಮಾಡಿದ್ದು, ವರ್ಷಾಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದೆ.
ಗಡುವು ನೀಡಿದ್ದರಿಂದ ಗ್ಯಾಸ್ ಏಜೆನ್ಸಿದಾರರು ಗ್ರಾಹಕರನ್ನು ಎಲ್ಲೆದರಲ್ಲಿ ನಿಲ್ಲಿಸಿ ಇಕೆವೈಸಿ ಮಾಡಿಸುತ್ತಿದ್ದಾರೆ, ಗ್ಯಾಸ್ ಸರಬರಾಜು ಮಾಡುವವವರಿಂದ ಮನೆ ಮನೆಗೆ ತೆರಳಿ ಮಾಡಬೇಕು ಎಂಬುದು ನಿಯಮವಿದೆ, ಜೊತೆಗೆ ಗ್ಯಾಸ್ ಬುಕ್ ಮಾಡುವ ಸಮಯದಲ್ಲಿಯೂ ಇಕೆವೈಸಿ ಮಾಡಿಸಬೇಕು, ಬದಲಾಗಿದೆ, ಗಡುವು ನೀಡಿದ್ದರಿಂದ ಗ್ರಾಹಕರು ತಮ್ಮ ಕೆಲಸವನ್ನು ಬದಿಗಿಟ್ಟು ಇಕೆವೈಸಿ ಮಾಡಿಸಲು ಬಂದಿದ್ದಾರೆ, ಆದರೆ ಸಮರ್ಪಕ ವ್ಯವಸ್ಥೆ ಮಾಡದೇ ಇರುವುದರಿಂದ ಗ್ರಾಹಕರನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಇಕೆವೈಸಿ ಮಾಡಿಸುತ್ತಿದ್ದು ಗ್ರಾಹಕರ ಏಜೆನ್ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.