ರಾಯಚೂರು. ಅಕ್ರಮ ಮರಳು ಸಾಗಾಣೆ ಪ್ರಕರಣದಲ್ಲಿ ದೇವದುರ್ಗ ಸಿಪಿಐ ಅಶೋಕ ಸದಲಗಿ ಅವರನ್ನು ಈಶ್ಯಾನ ವಲಯ ಪೋಲಿಸ್ ಮಹಾ ನಿರ್ದೇಶಕ ಲೋಕೇಶ್ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ದೇವದುರ್ಗ ತಾಲೂಕಿನಲ್ಲಿ ಅಕ್ರಮವಾಗಿ ಮರಳು ಸಾಗಣೆಯನ್ನು ಜಪ್ತಿ ಮಾಡಿ ಮಾಡಲಾಗಿತ್ತು, ದೇವದುರ್ಗ ಪೋಲಿಸ್ ಠಾಣೆ ಹತ್ತಿರ ಇರಲಿಸಲಾಗಿತ್ತು, ಸೀಜ್ ಮಾಡಿದ ಮರಳನ್ನು ಸಾಗಾಣೆ ಮಾಡಲು ರಾಯಲ್ಟಿ ಬೇಕು, ರಾಯಲ್ಟಿ ಇಲ್ಲದೆ ಸಾಗಾಣೆ ಪ್ರಕರಣದಲ್ಲಿ ಸಿಪಿಐ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿ ಹೋರಾಟ ನಡೆಸಿದ್ದರು, ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ಪೋಲಿಸ್ ಮಹಾ ನಿರ್ದೇಶಕ
ಅವರು ಅಮಾನತು ಗೊಳಿಸಿ ಆದೇಶ ಹೊರಡಿಸಿದ್ದಾರೆ.
ವಶಪಡಿಸಿಕೊಂಡ ಮರಳು ಸಾಗಣೆ ಮಾಡಿದ ಗಂಬೀರ ಆರೋಪ ಮೇಲೆ ಸೇವೆಯಿಂದ ಅಮಾನತ್ ಗೊಳಿಸಲಾಗಿದೆ
ರಾಜ್ಯದಲ್ಲಿಯೆ ಅತಿಹೆಚ್ಚು ಅಕ್ರಮ ಮರಳು ಪ್ರಕರಣಗಳು ಜಿಲ್ಲೆಯಲ್ಲಿಯೇ ದಾಖಲಾಗಿರುವದು ಗಮನಾರ್ಹ. ಅಕ್ರಮ ಮರಳು ಸಾಗಣೆಗೆ ಚುನಾಯಿತ ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿರುವ ಅರೋಪಕ್ಕೆಪ್ರಕರಣ ನಿದರ್ಶನವಾಗಿದೆ.