ರಾಯಚೂರು,ಏ.೨- ನಗರದ ಈಶ್ವರನಗರದ ನಿವಾಸಿ ವಿರೇಶ ಸಾವಿಗೆ ಪಶ್ಚಿಮ ಪೊಲೀಸ್ ಠಾಣೆಯ ಸಿಪಿಐ ನಾಗರಾಜ ಮೇಕಾ ಮತ್ತು ಪಿಎಸ್ಐ ಮಂಜುನಾಥ ಹಲ್ಲೆಯೇ ಕಾರಣ ಎಂದು ಮೃತನ ಸಹೋದರಿ ನೀಡಿದ ದೂರಿನ ಮೇರೆಗೆ ಇರ್ವರನ್ನು ಅಮಾನತ್ ಗೊಳಿಸಿ ಎಸ್ಪಿ ಪುಟ್ಟಮಾದಯ್ಯ ಆದೇಶಿಸಿದ್ದಾರೆ.
ಮೃತ ವಿರೇಶನ ಸಹೋದರಿ ನೀಡಿದ ದೂರಿನ ಮೇರೆಗೆ ಮಂಗಳವಾರ ಪಶ್ಚಿಮ ಠಾಣೆಯಲ್ಲಿ ದೂರು ನೀಡಿದ್ದರು.ಘಟನೆಗೆ ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ಅಮಾನತ್ ಮಾಡುವಂತೆ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮೃತ ಕುಟುಂದರೊಂದಿಗೆ ಎಸ್ಪಿ ಕಚೇರಿ ಮುಂದೆ ಮಂಗಳವಾರ ರಾತ್ರಿ ಪ್ರತಿಭಟನೆ ನಡೆಸಿದ್ದರು. ಘಟನೆಯನ್ನು ತನಿಖೆ ಒಳಪಡಿಸಲಾಗಿದ್ದು ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ ಗೊಳಿಸಿ ಕೇಂದ್ರ ಸ್ಥಾನ ಬಿಡದಂತೆ ಸೂಚಿಸಿದ್ದಾರೆ.