ರಾಯಚೂರು. ತಾಲ್ಲೂಕಿನ ಶ್ರೀನಾರದಗಡ್ಡೆ ಮಠದ ಆಸ್ತಿ ನಿರ್ವಹಣೆಯ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಪಡೆಯಲು ನಾರದಗಡ್ಡೆ ಹಾಗೂ ಸುತ್ತಮುತ್ತಲಿನ ಪಂಚಾಯತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ವತಿಯಿಂದ ಗುರುವಾರ ಡಂಗುರ ಸಾರಲಾಯಿತು.
ಇದೇ ಜೂನ್ 30ರಂದು ಶ್ರೀ ನಾರದಗಡ್ಡೆ ಮಠದ ಆವರಣದಲ್ಲಿ ಮಠದ ಆಸ್ತಿ ನಿರ್ವಹಣೆಯ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಪಡೆಯಲು ಪೂರಕ ದಾಖಲೆಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳು, ಶ್ರೀನಾರದಗಡ್ಡೆ ಮಠದ ಪೀಠಾಧಿಪತಿಗಳು, ಸಾರ್ವಜನಿಕ ಮತ್ತು ಭಕ್ತಾಧಿಗಳು ಹಾಜರಾಗುವಂತೆ ಈಗಾಗಲೇ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ರಾಯಚೂರು ತಹಶೀಲ್ದಾರ್ ಸುರೇಶ್ ವರ್ಮ ಅವರು ತಿಳಿಸಿದ್ದಾರೆ.