ರಾಯಚೂರ ಮೇ 8 – ಪಜಿಲ್ಲೆಯ ಶಕ್ತಿನಗರದ ರಾಯಚೂರು ವಿದ್ಯುತ್ ಶಾಖೋತ್ಪನ್ನ ಕೇಂದ್ರದ (RTPS) ಹೆಲಿಪ್ಯಾಡ್ ಆವರಣದಲ್ಲಿ ‘ಆಪರೇಷನ್ ಅಭ್ಯಾಸ್’ (Operation Abhyas) ನಾಗರಿಕ ರಕ್ಷಣಾ ಅಣಕು ಪ್ರದರ್ಶನ (Civil Defence Excercise/Mock Drill) ನ್ನು ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಜಿಲ್ಲಾ ಅಗ್ನಿಶಾಮಕ ದಳ ಮತ್ತು ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಮೇ 09ರಂದು ಸಂಜೆ 4 ಗಂಟೆಗೆಆಯೋಜಿಸಲಾಕಾರ್ಯಕ್ರಮದಲ್ಲಿ ಶಕ್ತಿನಗರ ಗಗ್ರಾಹಾಗೂ ಸುತ್ತ ಮುತ್ರಲಿನ ಗ್ರಾಮಸ್ತರು ಭಾಗವಹಿಸುವಂತೆ ಡಿಸಿ ನಿತೀಶಕುಮಾರ ಮನವಿ ಮಾಡಿದ್ದಾರೆ., ಯುದ್ಧ ಸಂಭವಿಸಿದಲ್ಲಿ ಅಥವಾ ಇಂತಹ ಯಾವುದೇ ಘಟನೆ ಜರುಗಿದ್ದಲ್ಲಿ ಭಯಭಿತರಾಗದೇ, ಯುದ್ಧದ ಸನ್ನಿವೇಶವನ್ನು ಧೈರ್ಯದಿಂದ ಎದುರಿಸಲು ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳನ್ನು ಅಣಕು ಪ್ರದರ್ಶನದ ಮೂಲಕ ವಿವರಿಸಿ ಶಕ್ತಿನಗರ ಹಾಗೂ ಸುತ್ತಲಿನ ಗ್ರಾಮಸ್ಥರಲ್ಲಿ ಆತ್ಮಸ್ಥೆರ್ಯ ತುಂಬುವಂತಹ ಕಾರ್ಯಕ್ರಮವಾಗಿರುತ್ತದೆ.
ಈ ಒಂದು ‘ಆಪರೇಷನ್ ಅಭ್ಯಾಸ್” (Operation Abhyas) ನಾಗರಿಕ ರಕ್ಷಣಾ ಅಣಕು ಪ್ರದರ್ಶನ (Civil Defence Excercise Mock Drill) ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಜಿಲ್ಲಾ ಅಗ್ನಿಶಾಮಕ ದಳ, ಜಿಲ್ಲಾ ಆರೋಗ್ಯ ಇಲಾಖೆ. ಎಸ್.ಡಿ.ಆರ್.ಎಫ್. ಸಿ.ಐ.ಎಸ್.ಎಫ್. ಎನ್.ಸಿ.ಸಿ ಮತ್ತು ಎನ್.ಎಸ್.ಎನ್ ಸ್ವಯಂ ಸೇವಕರು ಭಾಗವಹಿಸಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಾರಣ ಶಕ್ತಿನಗರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ವಾಸಿಸುವ ಎಲ್ಲಾ ನಾಗರಿಕರು ಈ ಕಾರ್ಯಕ್ರಮವನ್ನು ವೀಕ್ಷಿಸಲು ಆಗಮಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಡಿಸಿ ನಿತೀಶ್ ಕೆ ತಿಳಿಸಿದ್ದಾರೆ.