ರಾಯಚೂರು,ನ.೨೦- ಜಿಲ್ಲೆಯಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿದ್ದು ತೆರವು ಕಾರ್ಯಚರಣೆಯನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೀಶ.ಕೆ ತಿಳಿಸಿದ್ದಾರೆ.
ಅವರಿಂದು ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿ, ರಾಯಚೂರು ನಗರದ ಸಂತೋಷ ನಗರದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಪ್ರೌಢಶಾಲೆ ನಿರ್ಮಾಣಕ್ಕೆ ಕಾಯ್ದಿರಿಸಿದ್ದ ಸ್ಥಳದಲ್ಲಿ ಶೇಡ್ ನಿರ್ಮಾಣ ಮಾಡಿ, ನಂತರ ಎರಡು ಮೂರ್ತಿಇಟ್ಟು ದೇವಸ್ಥಾನ ರೂಪ ಕೊಟ್ಟಿದ್ದರು. ಅನೇಕ ದೂರುಗಳ ಹಿನ್ನಲೆಯಲ್ಲಿ ಮಂಗಳವಾರ ರಾತ್ರಿ ಕಾರ್ಯಾಚರಣೆ ನಡೆಸಿ ತೆರವು ಗೊಳಿಸಲಾಗಿದೆ. ಅನಧಿಕೃತವಾಗಿ ಸರಕಾರಿ ಜಾಗ ಒತ್ತುವರಿ ತೆರವುಗೊಳಿಸಲು ಇತ್ತೀಚಿಗೆ ಕಮಿಟಿ ಜಿಲ್ಲೆಗೆ ಭೇಟಿ ನೀಡಿ ತರಬೇತಿ ನೀಡಿದೆ. ಅದ್ಯತೆ ಮೇಲೆ ತೆರವುಗೊಳಿಸಲಾಗುತ್ತದೆ. ಸರಕಾರಿ ಶಾಲೆ ನಿರ್ಮಾಣ ಕ್ಕೆ ಒಂದು ಕೋಟಿ ರೂ ಕೆಕೆಆರ್‌ಡಿಬಿದಡಿ ಅನುದಾನ ಬಿಡುಗಡೆಯಾಗಿದ್ದು ಶಾಲೆ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುತ್ತದೆ ಎಂದರು.
ನಗರದಲ್ಲಿ ಸರಕಾರಿ ಜಾಗದಲ್ಲಿ ಮನೆಗಳು ನಿರ್ಮಾಣವಾಗಿವೆ. ಆರ್‌ಡಿಎ ದಿಂದಲೇ ಔಟ್ ಗೆ ಅನುಮತಿ ನೀಡಲಾಗಿದೆ. ಇಂತಹ ಪ್ರಕರಣ ಕಾನೂನಾತ್ಮಕ ಪರಿಶೀಲಿಸಿ ಕ್ರಮಕೈಗೊಳ್ಳಬೇಕಾಗುತ್ತದೆ ಎಂದರು.
ಆರ್ ಟಿಪಿಎಸ್ ಹಾರುಬೂದಿ ಕೃಷ್ಣ ನದಿಗೆ ಸೇರುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಯೊಂದಿಗೆ ಚರ್ಚಿಸಲಾಗಿದೆ.ಶಾಶ್ವತ ಕ್ರಮ ಕೈಗೊಳ್ಳಲು ಸೂಚನೆ ನೀಡಿರುವದಾಗಿ ಹೇಳಿದರು .ಕ್ರಮವಹಿಸದೇ ಹೋದಲ್ಲಿ ಕ್ರಮ ಕೈಗೊಳ್ಳುವದಾಗಿ ಹೇಳಿದರು.