ರಾಯಚೂರು.ಲೋಕಸಭಾ ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡ ಚುನಾವಣೆ ಅಧಿಕಾರಿಯು ಕರ್ತವ್ಯ ಲೋಪ ಆರೋಪ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಎಲ್. ಚಂದ್ರಶೇಖರ್ ನಾಯಕ ಆದೇಶ ಹೊರಡಿಸಿದ್ದಾರೆ.
ರಾಯಚೂರಿನ ಲಿಂಗಸೂಗೂರು ತಾಲೂಕಿನ
ಮುದಗಲ್ ಹೋಬಳಿಯ ಎಫ್ ಎಸ್ ಟಿ ಆಗಿದ್ದ
ಅಧಿಕಾರಿ ರಮೇಶ್ ರಾಥೋಡ್ ಅಮಾನತು ಗೊಂಡ ಅಧಿಕಾರಿಯಾಗಿದ್ದಾರೆ
ರಮೇಶ್ ರಾಥೋಡ್ ಅವರು ಹಿಂದುಳಿದ ವರ್ಗಗಳ ಕಲ್ಯಾಧಿಕಾರಿಯಾಗಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಕರ್ತವ್ಯ ನಿರ್ವಹಿಸದೇ ತಮ್ಮ ಬದಲಿಗೆ ಬೇರೆ ವ್ಯಕ್ತಿಗೆ ಕೆಲಸಕ್ಕೆ ಕಳುಹಿಸಿದ್ದಾರೆ, ಈ ಹಿನ್ನೆಲೆಯಲ್ಲಿ
ರಮೇಶ್ ರಾಥೋಡ್ ಅವರನ್ನು ಅಮಾನತು ಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಎಲ್. ಚಂದ್ರಶೇಖರ್ ನಾಯಕ ಆದೇಶ ಹೊರಡಿಸಿದ್ದಾರೆ.