ರಾಯಚೂರು. ನಗರ ಸ್ಥಳಿಯ ಸಂಸ್ಥೆಗಳಿಗೆ ತೆರವಾದ ಸ್ಥಾನಗಳಿಗೆ ಡಿ.27 ರಂದು ಉಪ ಚುನಾವಣೆಯ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಮತ್ತು ಸಾಗಾಣಿಕಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಆದೇಶ ಹೊರಡಿಸಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳಿಗೆ ಉಪ ಚುನಾವಣೆ-2023 ರ ಚುನಾವಣಾ ವೇಳಾಪಟ್ಟಿ ಪ್ರಕಟಣೆಯಾಗಿರುವ ಹಿನ್ನಲೆಯಲ್ಲಿ ಉಪ ಚುನಾವಣೆಯು ಡಿ.27 ರಂದು ಮತದಾನ ಕಾರ್ಯ ನಡೆಯಲಿರುವ ಹಿನ್ನಲೆಯಲ್ಲಿ ರಾಯಚೂರು ನಗರ ಸಭೆ, ಸಿಂಧನೂರು ನಗರಸಭೆ, ದೇವದುರ್ಗ ಪುರಸಭೆ ಮತ್ತು ಲಿಂಗಸೂಗೂರು ಪುರಸಭೆಯಲ್ಲಿ ಮತದಾನವನ್ನು ಸೂಸುತ್ರವಾಗಿ ಶಾಂತಿ ಸುವ್ಯವಸ್ಥೆಯಿಂದ ನಡೆಸುವ ಉದ್ದೇಶದಿಂದ ಹಾಗೂ ಕಾನೂನು ಮತ್ತು ಪಾಲಿಸುವ ಹಿತದೃಷ್ಟಿಯಿಂದ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ಮದ್ಯ ಸಾಗಾಣಿಕೆ ಮಾಡುವ ಹಾಗೂ ಡಿಪೋಗಳಿಗೆ ಹೊರತುಪಡಿಸಿ, ಡಿ.25 ರಂದು ಸಂಜೆ 5 ಗಂಟೆಯಿಂದ ಡಿ.27ರ
ಮಧ್ಯರಾತ್ರಿ ಗಂಟೆಯವರೆಗೆ ಎಲ್ಲಾ ರೀತಿಯ ಮದ್ಯ ಮಾರಾಟ, ಸಾಗಾಣಿಕೆಯನ್ನು ನಿಷೇಧಿಸಲಾಗಿದೆ.
ಒಂದು ವೇಳೆ ಮಾರಾಟ ಮತ್ತಯ ಸಾಗಾಣಿಕೆ ಕಂಡು ಬಂದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಆದೇಶ ಹೊರಡಿಸಿದ್ದಾರೆ.