ರಾಯಚೂರು: ನಗರದ ಪೊಲೀಸ್ ಶ್ವಾನದಳದ ಕ್ರೈಂ ಡಾಗ್ ಸಿರಿ ( ಡಾಬರ್ಮಾನ್) ಇಂದು ಬೆಳಗ್ಗೆ ಕೊನೆಯುಸಿರು ಹೇಳದಿದ್ದು, ನಗರದ ಪೊಲೀಸ್ ಪರೈಡ್ ಮೈದಾನದ ಪಕ್ಕದಲ್ಲಿ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಪುಟ್ಟಮಾದಯ್ಯ ನೇತೃತ್ವದಲ್ಲಿ ಸಕಲ ಪೊಲೀಸ್ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು. 2016ರಲ್ಲಿ ಜನಿಸಿದ ಶ್ವಾನ, 2017ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿತ್ತು. ಬೆಂಗಳೂರಿನ ಸಿ ಎ ಆರ್ ಸೌತ್ ಅಡುಗೋಡೆಯಲ್ಲಿ, ಹ್ಯಾಂಡ್ಲರಾಗಿ ಜಯಕುಮಾರ್ ಮತ್ತು ಶರಣಬಸವ ತರಬೇತಿ ಪಡೆದಿದ್ದರು. ಜಿಲ್ಲೆಯ ಹಲವು ಕಳ್ಳತನ ಪ್ರಕರಣಗಳು ಸೇರಿದಂತೆ, ಕೊಲೆ-ದರೋಡೆ ಹಲವು ಪ್ರಕರಣಗಳ ಭೇದಿಸಿತ್ತು. ಅದರಲ್ಲೂ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2022ರಲ್ಲಿ ಪೋಸ್ಟ್ ಆಫೀಸ್ ಕಳ್ಳತನದ ಪ್ರಕರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತ್ತು. ಇನ್ನು ಕಳೆದ ಹಲವು ದಿನಗಳಿಂದ ವಯೋ ಸಹಜ ಅನಾರೋಗ್ಯಕ್ಕೆ ಈಡಾಗಿತ್ತು, ಕಳೆದ ಎರಡು ದಿನಗಳಿಂದ ಊಟವನ್ನು ತ್ಯಜಿಸಿ, ಇಂದು ಮೃತಪಟ್ಟಿದೆ. ಅಂತ್ಯಸಂಸ್ಕಾರದ ವೇಳೆ ಹೆಚ್ಚುವರಿ ಪೊಲೀಸ್ ಅಧಿಕರು ಶಿವಕುಮಾರ್ ಮತ್ತು ಹರೀಶ್, ಡಿವೈಎಸ್ಪಿ(ಡಿಎಆರ್) ಪ್ರಮಾನಂದ ಘೋಡ್ಕೆ ಸೇರಿದಂತೆ ಡಿಎಆರ್ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.
Megha News > Local News > ಪೊಲೀಸ್ ಶ್ವಾನ ಸಾವು: ಸಕಲ ಗೌರವದೊಂದಿಗೆ ಸಂಸ್ಕಾರ