ರಾಯಚೂರು: ದೇವದುರ್ಗ ತಾಲೂಕಿನ ಭೂಮನಗುಂಡ ಗ್ರಾಮ ಪಂಚಾಯಿತಿ ಎದುರು ಗಡೆ ಭೂಮನಗುಂಡ ಗ್ರಾಮದ ನೀರಿನ ಸಮಸ್ಯೆನ ಬಗೆಹರಿಸಬೇಕೆಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯಿಂದ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಯಿತು.
ಭೂಮನಗುಂಡ ಗ್ರಾಮಕ್ಕೆ ನೀರಿನ ಸಮಸ್ಯೆ ಬಗೆಹರಿಸಲು 38 ಲಕ್ಷ ಹಣ ಮಂಜೂರಾಗಿ ಕೆಲಸ ಮುಗಿದಿದೆ. ಆದರೂ ಕೂಡ ಪ್ರತಿದಿನ ನೀರು ಬಿಡುತ್ತಿಲ್ಲ ಆದ್ದರಿಂದ ದಿನದ ಎಲ್ಲ ಕೆಲಸ ಬಿಟ್ಟು ನೀರಿಗಾಗಿ ಬೇರೆಬೇರೆ ಕಡೆ ಓಡಾಡೋ ಪರಿಸ್ಥಿತಿ ಬಂದಿದೆ. ಆದ್ದರಿಂದ ಮಾನ್ಯ ಪಿಡಿಓ ಕಟ್ಟೆಪ್ಪ ಅವರಿಗೆ ಮನವಿ ಪತ್ರ ಕೊಡಲಾಯಿತು. ಮನವಿ ಪತ್ರಕ್ಕೆ ಪ್ರತಿಕ್ರಿಯಿಸಿ ಕೂಡಲೇ ಸಮಸ್ಯೆ ಯನ್ನು ಒಂದು ವಾರದೊಳಗೆ ಬಗೆಹರಿಸು ತ್ತೇನೆಂದು ಆಶ್ವಾಸನೆ ನೀಡಿದ್ದಾರೆ.
ಹಾಗಾಗಿ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಮುಂದೂಡಲಾಗಿದ್ದು ಸಮಸ್ಯೆ ಬಗೆಯರದಿದ್ದರೆ ಮುಂದೆ ದೊಡ್ಡ ಮಟ್ಟದ ಹೋರಾಟಕ್ಕೆ ನಾವೆಲ್ಲ ರೂ ಸಜ್ಜಾಗಬೇಕೆಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಜಿಲ್ಲಾ ಕಾರ್ಯದ ರ್ಶಿಗಳಾದ ಮಲ್ಲನಗೌಡ ಅಂಚೆಸೂಗೂರು ಹೇಳಿದರು.
ಪ್ರತಿದಿನ ಆರು ಗಂಟೆಗಳ ಕಾಲ( ಸಂಜೆ 3 ತಾಸು ಮತ್ತು ಮುಂಜಾನೆ 3 ತಾಸು ) ನೀರು ಬಿಡಬೇಕು. ವಾಟರ್ ಮ್ಯಾನ್ ಸಮಸ್ಯೆಯನ್ನು ಬಗೆಹರಿಸಬೇಕು.ಊರಿನ ವಾಟರ್ ಟ್ಯಾಂಕ್ ಮೂಲಕ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು.
ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ಯಾದ ದುರ್ಗಣ್ಣ ಬೂಮನಗುಂಡ ಗ್ರಾಮ ಘಟಕದ ಕಾರ್ಯದರ್ಶಿಯಾದ ಹುಲಿಗೆಪ್ಪ, ಶಿವಪ್ಪ, ಹನುಮೇಶ , ಹನುಮಯ್ಯ, ಬಾಲಮ್ಮ , ಮಲ್ಲಮ್ಮ, ಲಕ್ಷ್ಮಿ, ಈರಣ್ಣ ಕಮಲ್ದಿನ್ನಿ ಸೇರಿದಂತೆ ಅನೇಕರು ಇದ್ದರು.