ರಾಯಚೂರು.ಡೆಂಗ್ಯೂ ಜ್ವರ ನಿಯಂತ್ರಣ ನಮ್ಮೆಲ್ಲರ ಜವಬ್ದಾರಿ ಡೆಂಗ್ಯೂ ಜ್ವರ ಕುರಿತು ಒಬ್ಬರಿಗೊಬ್ಬರು ಮಾಹಿತಿ ನೀಡಿದ್ದಲ್ಲಿ ಡೆಂಗ್ಯೂ ಜ್ವರ ನಿಯಂತ್ರಿಸಬಹುದು. ಡೆಂಗ್ಯೂ ನಿಯಂತ್ರಣದಲ್ಲಿ ವಿದ್ಯಾರ್ಥಿಗಳು ಪಾತ್ರ ಮಹತ್ವದ್ದು, ತಮ್ಮ ಕುಟುಂಬದವರಿಗೆ, ಸಂಬಂಧಿಕರಿಗೆ, ನೊರೆ ಹೊರರವರಿಗೆ ಡೆಂಗ್ಯೂ ಜ್ವರ ಕುರಿತು ಮಾಹಿತಿ ನೀಡಬೇಕು
ಎಂದು ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ
ಸರೋಜ.ಕೆ ತಿಳಿಸಿದರು.
ನಗರದ ನಿಜಲಿಂಗಪ್ಪ ಕಾಲೋನಿಯ ಶಾಹೀನ್ ಕಾಲೇಜ್ ನಲ್ಲಿ ಡೆಂಗ್ಯೂ ಜ್ವರ ಕುರಿತು ಆರೋಗ್ಯ ಅರಿವು ಕಾರ್ಯಕ್ರಮ ನಡೆಸಲಾಯಿತು. ಸಮುದಾಯದೊಂದಿಗೆ ಸೇರಿ ಡೆಂಗ್ಯೂ ಜ್ವರ ನಿಯಂತ್ರಿಸೋಣ ಈ ವರ್ಷದ ಘೋಷಣೆ- ಎಂದು ಹೇಳುತ್ತಾ ಪ್ರತಿ ವರ್ಷವೂ ಜುಲೈ ತಿಂಗಳಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು,
ಡೆಂಗ್ಯೂ ಜ್ವರ ಕುರಿತು ಎಲ್ಲರಿಗೂ ಮಾಹಿತಿ ಅತ್ಯವಶ್ಯಕ. ಡೆಂಗ್ಯೂ ಜ್ವರ ವೈರಸ್ ನಿಂದ ಬರುವ ಕಾಯಿಲೆ, ಸಾಂಕ್ರಾಮಿಕ ರೋಗವಾಗಿದ್ದು ಈಡೀಸ್ ಈಜಿಪ್ಟೈ ಎಂಬ ಸೋಂಕಿತ ಸೊಳ್ಳೆ ಕಚ್ಚುವದರಿಂದ ಬರುವ ಕಾಯಿಲೆ.ಈಡಿಸ್ ಈಜಿಪ್ಟೈ ಸೊಳ್ಳೆಗೆ ಟೈಗರ್ ಸೊಳ್ಳೆಯಂತಲೂ ಕರೆಯುತ್ತಾರೆ.ಈ ಸೊಳ್ಳೆ ಸ್ವಚ್ಚವಾದ ನೀರಿನಲ್ಲಿ ಬೆಳೆಯುತ್ತದೆ. ನೂರರಿಂದ ಇನ್ನೂರು ತತ್ತಿಗಳನ್ನು ಇಡುತ್ತದೆ. ಹಗಲಲ್ಲೆ ಕಚ್ಚುತ್ತದೆ. ಮನೆಯಲ್ಲಿ ಇರುವ ಪರಿಕರಗಳಲ್ಲಿ, ಘನ ತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿ ಯಾಗುತ್ತವೆ. ನಿಂತ ನೀರು ಸೊಳ್ಳೆ ಉತ್ಪತ್ತಿ ತಾಣಗಳು, ಡೆಂಗ್ಯೂ ಜ್ವರರಲ್ಲಿ ಮೂರು ವಿಧ ಡೆಂಗ್ಯೂ ಜ್ವರ , ಡೆಂಗ್ಯೂ ರಕ್ತಸ್ರಾವ ಡೆಂಗ್ಯೂ ಶಾಕ್ ಸಿಂಡ್ರೋಮ್, ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಇರುವುದಿಲ್ಲ, ರೋಗದ ಲಕ್ಷಣಗಳ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಸ್ವಯಂರಕ್ಷಣಾ ವಿಧಾನ ಮೈ ತುಂಬಾ ಬಟ್ಟೆ ಧರಿಸಿವದು, ಸೊಳ್ಳೆ ಪರದೆ ಉಪಯೋಗಿ ಸಬೇಕು ಕಿಡಿಕಿಗಳಿಗೆ ಜಾಲರಿ ಅಳವಡಿಸಬೇಕು, ಗುಡ್ ನೈಟ್, ಸೊಳ್ಳೆ ಹೊಡೆಯುವ ಬ್ಯಾಟ್, ಉಪಯೋಗಿಸಬೇಕು, ಯಾವುದೇ ಜ್ವರ ಇರಲಿ ಹತ್ತಿರ ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ವನಿತ, ಆಶಾ ಕಾರ್ಯಕರ್ತೆಯರು, ಹಾಜರಿದ್ದರು.