ರಾಯಚೂರು, ಡಿ.೪-ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ೨೧ ಮತಗಳ ಅಂತರದಿAದ ಆಹಾರ ಇಲಾಖೆ ಉಪನಿರ್ದೇಶಕ ಕೃಷ್ಣ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿಯಾಗಿದ್ದ ಮಹಾಂತೇಶ ೨೨ ಮತಗಳನ್ನು ಪಡೆದಿದ್ದು, ಆಂಜಿನೇಯ್ಯ ೬ ಮತಗಳನ್ನು ಪಡೆದಿದ್ದಾರೆ. ಕೃಷ್ಣ ೪೩ ಮತಗಳನ್ನು ಪಡೆಯುವ ಮೂಲಕ ಜಯ ಸಾಧಿಸಿದ್ದಾರೆ.
ಖಜಾಂಚಿ ಹುದ್ದೆಗೆ ನಡೆದ ಮತ ಏಣಿಕೆಯಲ್ಲಿ ಪ್ರಸನ್ನಕುಮಾರ ೩೫ ಮತಗಳ ಅಂತರದಿAದ ಜಯ ಸಾಧಿಸಿದ್ದಾರೆ. ಖಲೀಲ್ ೧೮ ಮತಗಳ ಪಡೆದರೆ, ರಾಜಶೇಖರ ೮ ಮತಗಳನ್ನು ಪಡೆದಿದ್ದಾರೆ. ಪ್ರಸನ್ನಕುಮಾರ ೪೫ ಮತ ಪಡೆದು ಜಯಶಾಲಿಯಾಗಿದ್ದಾರೆ.ರಾಜ್ಯ ಪರಿಷತ್ ಸದಸ್ಯ ಸ್ಪರ್ಧಿಸಿದ್ದ ಎಹಸಾನ್ ಹುಲ್ ಹಕ್ ೧೬ ಮತಗಳ ಅಂತರದಿAದ ಜಯ ಸಾಧಿಸಿದ್ದಾರೆ. ವೆಂಕಟಾಚಲ ಎಂಬುವವರು ೨೩ ಮತಗಳನ್ನು ಪಡೆದಿದ್ದು, ವೆಂಕಟೇಶ.ಡಿ, ೯ ಮತ ಪಡೆದಿದ್ದಾರೆ. ಎಹಸಾನ್‌ಉಲ್ ಹಕ್ ಒಟ್ಟು ೩೯ ಮತಗಳ ಅಂತರದಿAದ ಸಾಧಿಸಿದ್ದಾರೆ.
ಇಂದು ಬೆಳಿಗ್ಗೆಯಿಂದ ಮತದಾನ ನಡೆಯಿತು. ಸರ್ಕಾರಿ ನೌಕರರ ಸಂಘದ ವಿವಿಧ ಇಲಾಖೆಗಳಿಂದ ಆಯ್ಕೆಯಾದ ನಿರ್ದೇಶಕರು ಮತದಾನ ಮಾಡಿದರು ಸಂಜೆ ಮತ ಏಣಿಕೆ ನಡೆದು ಮೂರು ಸ್ಥಾನಗಳ ಫಲಿತಾಂಶ ಪ್ರಕಟಿಸಲಾಯಿತು. ಚುನಾವಣಾಧಿಕಾರಿ ಭೀಮಣ್ಣನಾಯಕ ಇವರು ಆಯ್ಕೆಯಾದ ಫಲಿತಾಂಶ ಪ್ರಕಟಿಸಿದರು.