Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ದೇವದುರ್ಗ ತಾಲೂಕ ಉದ್ಯೋಗ ಖಾತ್ರಿ ಅಕ್ರಮ: ೨೬ ಪಂಚಾಯ್ತಿಗಳ ಪಿಡಿಓಗಳ ಅಮಾನತ್ ?

ದೇವದುರ್ಗ ತಾಲೂಕ ಉದ್ಯೋಗ ಖಾತ್ರಿ ಅಕ್ರಮ: ೨೬ ಪಂಚಾಯ್ತಿಗಳ ಪಿಡಿಓಗಳ ಅಮಾನತ್ ?

ರಾಯಚೂರು.ದೇವದುರ್ಗ ತಾಲೂಕಿನ ಗ್ರಾಮ ಪಂಚಾಯ್ತಿಗಳಲ್ಲಿ ನಡೆದ ಉದ್ಯೋಗ ಖಾತ್ರಿ ಅಕ್ರಮ ಕುರಿತಾಗಿ ೨೭ ಗ್ರಾಮ ಪಂಚಾಯ್ತಿ ಪಿಡಿಓಗಳನ್ನು ಅಮಾನತ್‌ಗೊಳಿಸಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ಹೊರಡಿಸಿದ್ದಾರೆ ಎಂದು ಹೇಳಲಾಗಿದೆ.

ಉದ್ಯೋಗ ಖಾತ್ರಿ ಯೋಜನೆಯ ಲೆಕ್ಕ ಪರಿಶೋಧನಾ ವಿಭಾಗದಿಂದ ನಡೆಸಲಾಗಿದ್ದ ಮಧ್ಯಂತರ ವರದಿಯಲ್ಲಿ ಪಂಚಾಯ್ತಿವಾರು ಅನುದಾನ ದುರ್ಬಳಕೆ, ನಿಯಮಗಳ ಉಲ್ಲಂಘನೆ ಪ್ರಕರಣಗಳನ್ನು ತನಿಖೆಯಿಂದ ಬಹಿರಂಗಗೊAಡಿತ್ತು. ಈಗಾಗಲೇ ಪಂಚಾಯ್ತಿ ಪಿಡಿಓಗಳ ಕ್ರಿಮಿನಲ್ ಕೇಸ್ ದಾಖಲಿಸಲು ಸಿದ್ದತೆ ನಡೆಯುತ್ತಿರುವಾಗಲೇ ಪಿಡಿಓಗಳನ್ನು ಅಮಾನತ್‌ಗೊಳಿಸಿ ಆದೇಶ ನೀಡಲಾಗಿದೆ ಎಂದು ಹೇಳಲಾಗಿದೆ.
ದೇವದುರ್ಗ ತಾಲೂಕಿನ ನಾಲ್ಕು ಗ್ರಾಮ ಪಂಚಾಯ್ತಿಗಳಲ್ಲಿ ಸೇವೆ ಸಲ್ಲಿಸಿ ಬೇರೆಜಿಲ್ಲೆಗೆ ವರ್ಗಾವಣೆಯಾಗಿರುವ ನಾಲ್ಕು ಜನ ಪಿಡಿಓಗಳ ಅಮಾನತ್‌ಗೆ ಶಿಫಾರಸ್ಸು ಮಾಡಲಾಗಿದೆ. ರಾಮದುರ್ಗ ಮತ್ತು ಜಾಲಹಳ್ಳಿ ಪಂಚಾಯ್ತಿ ಸೇವೆ ಸಲ್ಲಿಸಿ ಕಲ್ಬುರ್ಗಿ ಜಿಲ್ಲೆಗೆ ವರ್ಗಾವಣೆಗೊಂಡಿರುವ ನಿಂಗಪ್ಪಪ, ಕೆ.ಇರಬಗೇರಾ ಪಂಚಾಯ್ತಿ ಸೇವೆ ಸಲ್ಲಿಸಿ ಬಾಗಲಕೋಟೆ ಜಿಲ್ಲೆಗೆ ವರ್ಗಾವಣೆಗೊಂಡಿರುವ ಸುನೀಲಕುಮಾರ ರಟಗಲ್, ಅಮರಾಪುರು ಮತ್ತು ಕೊಪ್ಪರ ಪಂಚಾಯ್ತಿಯಲ್ಲಿ ಸೇವೆ ಸಲ್ಲಿಸಿ ವಿಜಯಪುರಕ್ಕೆ ವರ್ಗವಾಗಿರುವ ಸಂಗಪ್ಪ ನಂದ್ಯಾಲ್, ಮಲ್ಲೇದೇವರಗುಡ್ಡದಲ್ಲಿ ಸೇವೆ ಸಲ್ಲಿಸಿ ಕಲಬುರ್ಗಿ ಜಿಲ್ಲೆಗೆ ವರ್ಗವಾಗಿರುವ ಸೋಮನಾಥ ಇವರ ಅಮಾನತ್ ಬಾಕಿಯಿದೆ.
ಉಳಿದಂತೆ ೨೬ ಗ್ರಾಮ ಪಂಚಾಯ್ತಿ ಸೇವೆಯಲ್ಲಿರುವ ಶಾವಂತಗೇರಾ ಪಂಚಾಯ್ತಿ ಪಿಡಿಓ ರೇಣುಕಮ್ಮ, ಅರಕೇರಾ ಗ್ರಾಮ ಪಂಚಾಯ್ತಿ ಪಿಡಿಓ ಬೂದೆಪ್ಪ, ಕರಡಿಗುಡ್ಡ ಗ್ರಾಮಪಂಚಾಯ್ತಿ ಪಿಡಿಓ ಶೇಖರಪ್ಪ, ಬಿ.ಗಣೇಕಲ್ ಪಂಚಾಯ್ತಿ ಪ್ರಭಾರಿ ಪಿಡಿಓ ಭುವನೇಶ, ರಾಯಚೂರು ತಾಲೂಕಿನ ಹೀರಾಪುರು ಪಂಚಾಯ್ತಿಯಲ್ಲಿರುವ ಚೆನ್ನಪ್ಪ, ಲಿಂಗಸೂಗೂರು ತಾಲೂಕಿನ ಬನ್ನಿಗೋಳ ಪಂಚಾಯ್ತಿ ಶಂಕ್ರಪ್ಪ, ದೇವದುರ್ಗ ತಾಲೂಕಿನ ಚಿಂಚೋಡಿ ಪಂಚಾಯ್ತಿ ಪಿಡಿಓ ಶಿವರಾಜ, ಮುಷ್ಠೂರು ಗ್ರಾಮ ಪಂಚಾಯ್ತಿ ದ್ವಿತೀಯ ದರ್ಜೆ ಸಹಾಯಕ ಚನ್ನಬಸವ, ಗಬ್ಬೂರು ಪಂಚಾಯ್ತಿ ಪಿಡಿಓ ಕೆ.ಬಾಬು, ಹೇಮನಾಳ ಗ್ರಾಮ ಪಂಚಾಯ್ತಿ ಶಿವುಕುಮಾರ, ಗೂಗಲ್ ಪಂಚಾಯ್ತಿ ಸೈಯದ್ ಫಯಾಜ್ ಅಲಿ, ಆಲ್ಕೋಡ ಪಂಚಾಯ್ತಿ ಶರಣಸಪ್ಪ, ಹೊಸೂರು ಸಿದ್ದಾಪುರು ಪಂಚಾಯ್ತಿ ಶಂಕರ, ಜಾಲಹಳ್ಳಿ ಪಂಚಾಯ್ತಿ ಪಿಡಿಓ ಬಸವರಾಜ ನಾಯಕ, ಹೀರೆಬೂದುರು ಗ್ರಾಮ ಪಂಚಾಯ್ತಿ ಉಮಾಕಾಂತ, ಪಲಕನಮರಡಿ ಗ್ರಾಮ ಪಂಚಾಯ್ತಿ ಕರಿಯಪ್ಪ, ಸೋಮನಮರಡಿ ಗ್ರಾಮ ಪಂಚಾಯ್ತಿ ಮಹಿಮದ್ ಜಹೀರ್ ಹುಸೇನ್, ಗೂಗಲ್ ಪಂಚಾಯ್ತಿಯ ಮುಮ್ತಾಜ್ ಬೇಗಂ, ಕೊತ್ತದೊಡ್ಡಿ ಪಂಚಾಯ್ತಿ ಅಶೋಕ, ಜೇರಬಂಡಿ ಪಂಚಾಯ್ತಿಯ ಪಿಡಿಓ ಸಂಜೀವರೆಡ್ಡಿ, ಮಲ್ಲದೇವರ ಗುಡ್ಡ ಪಂಚಾಯ್ತಿ ಪಿಡಿಓ ನಾಗೇಂದ್ರ, ಸಿರವಾರ ತಾಲೂಕಿನ ಅತ್ತನೂರು ಗ್ರಾಮ ಪಂಚಾಯ್ತಿ ಪಿಡಿಓ ಶರಣಪ್ಪ, ಮಸ್ಕಿತಾಲೂಕಿನ ತಲೇಖಾನ್ ಪಂಚಾಯ್ತಿ ಪಿಡಿಓ ಮಹಮದ್ ಉಮರ್, ಚಾಗಭಾವಿ ಪಂಚಾಯ್ತಿ ಪಿಡಿಓ ರೇಣುಕಾ, ಮಸರಕಲ್ ಪಂಚಾಯ್ತಿ ಪಿಡಿಓ ಚನ್ನರೆಡ್ಡಿ, ಕರಿಗುಡ್ಡ ಪಂಚಾಯ್ತಿಯ ತಿಮ್ಮಪ್ಪ ಇವರನ್ನು ಅಮಾನತ್‌ಗೊಳಿಸಿ ಆದೇಶ ಹೊರಡಿಸಲಾಗಿದೆ.
ದೇವದುರ್ಗ ತಾಲೂಕ ಹೊರತುಪಡಿಸಿ ಬೇರೆ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಓಗಳಿಗೆ ಆದೇಶ ರವಾನಿಸಿ ಆಯಾ ತಾಲೂಕ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪರ್ಯಾಯ ವ್ಯವಸ್ಥೆಗೂ ಸೂಚನೆ ನೀಡಲಾಗಿದೆ. ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತ್‌ಗೊಳಿಸಿ ಆದೇಶ ನೀಡಲಾಗಿದೆ.
ಗ್ರಾಮ ಪಂಚಾಯ್ತಿಯಲ್ಲಿ ತಾಂತ್ರಿಕ ಸಹಾಯಕರಾಗಿ ಕಾರ್ಯನಿರ್ವಹಿಸುವ ಗುತ್ತಿಗೆ ಸಿಬ್ಬಂದಿಗಳ ವಿರುದ್ದ ಶಿಸ್ತುಕ್ರಮಕ್ಕೆ ಸೂಚಿಸಿದ್ದರಿಂದ ತಾಂತ್ರಿಕ ಸಿಬ್ಬಂದಿಗಳ ವಿರುದ್ದವೂ ಕ್ರಮವಾಗಲಿದೆ. ಗುತ್ತಿಗೆ ಎಜೆನ್ಸಿ ವಿರುದ್ದ ಕ್ರಮ ಕೈಗೊಳ್ಳುವ ಕುರಿತು ಸರ್ಕಾರ ಮಟ್ಟದಲ್ಲಿ ಪರಿಶೀಲನೆಯಲ್ಲಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ೨೦೨೦-೨೧ ಮತ್ತು ೨೦೨೨-೨೩ ಸಾಲಿನಲ್ಲಿ ನಡೆದಿರುವ ಅಕ್ರಮ ಬಗೆದಷ್ಟು ಅಕ್ರಮಗಳು ಬಯಲಾಗುತ್ತಿವೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಕ್ರಮ ನಡೆಯಲು ಸಹಕರಿಸಿರುವ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಉಪ ಕಾರ್ಯದರ್ಶಿ ಹಾಗೂ ಯೋಜನಾಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಗ್ರಾಮೀಣಾಭಿವೃದ್ದಿ ಕೈಗೊಳ್ಳುವದು ಬಾಕಿಯಿದೆ. ಇಷ್ಟೊಂದು ದೊಡ್ಡ ಮಟ್ಟದ ಹಣ ಬಳಸಿಕೊಂಡವರು ಯಾರು, ಯಾರ ಜೇಬಿಗೆ ಸೇರಿದೆ ಎಂಬುದು ಬಯಲಾಗಬೇಕಿದೆ.

Megha News