ರಾಯಚೂರು,ಡಿ.೮- ಕರ್ತವ್ಯ ಲೋಪ ಆರೋಪ ಸಾಬೀತು ಆಗಿರುವ ಹಿನ್ನೆಲೆ ಯಲ್ಲಿ ದೇವದುರ್ಗ ಕ್ಷೇತ್ರಶಿಕ್ಷಣಾದಿಕಾರಿ ಸುಖದೇವರನ್ನು ಸೇವೆಯಿಂದ ಅಮಾನತ್ ಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಅದೀನ ಕಾರ್ಯದರ್ಶಿ ಆದೇಶಿಸಿದ್ದಾರೆ.
ಹಟ್ಟಿ ಚಿನ್ಬದ ಗಣಿ ನೀಡಿದ್ದ ೩೦ಲಕ್ಷ ರೂ ಹಣವನ್ನು ಊಟಿ ಸರಕಾರಿ ಪ್ರಾಥಮಿಕ ಶಾಲೆಯ ಅಭಿವೃದ್ದಿಗೆ ಬಳಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಬಳಸಿರುವದು, ಶಿಕ್ಷಕರ ವರ್ಗಾವಣೆ ಯಲ್ಲಿ ಹಷ ವಸೂಲಿ ಮಾಡಿರುವ ಆರೋಪ ಹಿನ್ಬಲೆಯಲ್ಲಿ ಸೇವೆಯಿಂದ ಮುಕ್ತಗೊಳಿಸಲಾಗಿತ್ತು, ವಿಚಾರಣೆಯ ಲ್ಲಿ ಆರೋಪ ಸಾಬೀತಾದ ಆದಾರದ ಮೇಲೆ ಸೇವೆಯಿಂದ ಅಮಾನತ್ ಗೊಳಿಸಿ ಯಾದಗಿರಿ ಡಯಟ್ ಕಾಲೇಜಿಗೆ ವರ್ಗಾಯಿಸಲಾಗಿದೆ. ಕೇಂದ್ರ ಸ್ಥಾನ ಅನುಮತಿಯಿಲ್ಲದೆ ಬಿಡುವಂತಿಲ್ಲ ಎಂದು ಅದೇಶದಲ್ಲಿ ಸೂಚಿಸಲಾಗಿದೆ.