ರಾಯಚೂರು,ಮೇ.೭- ಕೇಂದ್ರ ಸರಕಾರದಬೆಲೆ ಏರಿಕೆ ವಿರುದ್ದ ಕಾಂಗ್ರೆಸ್ಸ್ ಆಯೋಜಿಸಲಾಗಿದ್ದ ಪ್ರತಿಭಟನಾ ಸಮಾವೇಶ ಕೊನೆ ಲಕ್ಷಣದಲ್ಲಿ ರದ್ದಾಗಿದೆ.
ರಾಜ್ಯದ ಮುಖ್ಯಮಂತ್ರಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಸೇರಿದಂತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಉಸ್ತುವಾರಿ ಸಚಿವರುಗಳು ಭಾಗವಹಿಸಬೇಕಿದ್ದ ಸಮಾವೇಶಕ್ಕೆ ಸಕಲ ಸಿದ್ದತೆ ಕೈಗೊಳ್ಳಲಾಗಿತ್ತು. ಆದರೆ ಪಾಕಿಸ್ತಾನ ವಿರುದ್ದ ಧಾಳಿ ನಡೆದಿರುವ ಹಿನ್ನಲೆಯಲ್ಲಿ ಸಿಎಂ ಪ್ರವಾಸ ರದ್ದುಗೊಂಡಿರುವ ಹಿನ್ನಲೆಯಲ್ಲಿ ಸಮಾವೇಶ ರದ್ದುಗೊಳಿಸಿರುವದಾಗಿ ಕಾಂಗ್ರೆಸ್ ನಾಯಕರು ಪ್ರಕಟಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನ್ಯರಾಜ್ಯಗಳ ಪ್ರವಾಸದಲ್ಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ ದೆಹಲಿಗೆ ತೆರಳಿದ್ದಾರೆ. ಇನ್ನೇನು ಸಿಎಂ ಸಿದ್ದರಾಮಯ್ಯ ಭಾಗವಹಿಸಬೇಕಿತ್ತು. ಕೊನೆ ಕ್ಷಣದಲ್ಲಿ ಸಿಎಂ ಪ್ರವಾಸವೂ ರದ್ದುಗೊಂಡಿದ್ದರಿಂದ ಇಡಿ ಕಾರ್ಯಕ್ರಮವೇ ರದ್ದುಗೊಂಡಿದೆ. ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಮತ್ತುಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ ಹೊರತುಪಡಿಸಿದರೆ ಬೇರ್ಯಾವ ಸಚಿವರು ಆಗಮಿಸಿಲ್ಲ. ವಿವಿಧ ಜಿಲ್ಲೆಗಳಿಂದ ಸಮಾವೇಶಕ್ಕೆ ಆಗಮಿಸುತ್ತಿದ್ದ ಕಾರ್ಯಕರ್ತರು ಮಾರ್ಗ ಮದ್ಯದಿಂದ ಮರುಳುವಂತಾಯಿತು.