ರಾಯಚೂರು.ಆಯುಷ್ಮಾನ ಭವ ಕಾರ್ಯಕ್ರ ಮದ ಅಡಿಯಲ್ಲಿ ಆರೋಗ್ಯ ಮೇಳ ಹಮ್ಮಿ ಕೊಂಡಿದ್ದು, ಜನರು ಆಗಮಿಸದೇ ಇರುವುದನ್ನು ಕಂಡು ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ವೈ.ಸುರೇಂದ್ರ ಬಾಬು ತರಾಟೆಗೆ ತೆಗೆದುಕೊಂಡರು.
ಮಾನವಿ ತಾಲೂಕಿನ ಕಲ್ಲೂರು ಗ್ರಾಮದಲ್ಲಿನ
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯುಷ್ಮಾನ ಭವ ಕಾರ್ಯಕ್ರಮದಡಿ ಆರೋಗ್ಯ ಮೇಳ ಏರ್ಪಡಿಸಿ ಆರೋಗ್ಯದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ, ಆಯುಷ್ಮಾನ ಭಾರತ ಆರೋಗ್ಯ ಕಾರ್ಡ್ ಗಳನ್ನು ನೀಡಲು ಹಾಗೂ ಇನ್ನಿತರ ಆರೋಗ್ಯ ಸಂಭಂದಿಸಿದ ತಪಾಸಣೆ ಮಾಡಲು ಆರೋಗ್ಯ ಮೇಳಕ್ಕೆ ಜನರಿಗೆ ಜಾಗೃತಿ ಮೂಡಿಸಿ ಕರೆತರಲು ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ ಜನರು ಇಲ್ಲದೇ ಇರುವುದನ್ನು ಕಂಡು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡರು.
ನಂತರ ಅಂಗನವಾಡಿ ಕಾರ್ಯಕರ್ತರ ಮಾಸಿಕ ಸಭೆ ನಡೆಸಿ ಗ್ರಾಮದಲ್ಲಿರುವ ಎಲ್ಲಾ ಅರ್ಹ ಫಲಾನುಭವಿಗಳಿಗೆ ಆರೋಗ್ಯ ಕಾರ್ಡ್ (ಎಬಿಪಿಎಂಜೆವೈ) ಕಾರ್ಡ್ ನೋಂದಣಿ ಮಾಡಿಸು ವಂತೆ ತಿಳಿಸಿದರು. ಜನರು ಸ್ವಯಂ ಪ್ರೇರಿತವಾಗಿ ಅಂಗಾಂಗ ದಾನ ಮಾಡಲು ಸಾರ್ವಜನಿಕರಿಗೆ ಅರಿವು ಮೂಡಿಸಿ ಕ್ಯೂಅರ್ ಕೊಡ್ ಸ್ಕ್ಯಾನ್ ಮಾಡಿ ಅರ್ಜಿ ಸಲ್ಲಿಸಲು ಸೂಚಿಸಿದರು.