ರಾಯಚೂರು ಡಿ:17: ರಾಯಚೂರು ತಾಲೂಕಿನ ಚಿಕ್ಕಸೂಗುರು ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಗರ್ಭಿಣಿಯರ ಮನೆಗಳಿಗೆ ಭೇಟಿ ನೀಡಿ, ಅಂಗನವಾಡಿ ಕೇಂದ್ರಗಳಿಂದ ಮಾತೃ ಪೂರ್ಣ ಯೋಜನೆಯಡಿ ದೊರೆಯುವ ಹಸಿರು ಕಾಳು, ಮೊಟ್ಟೆ, ಹಾಲು, ಶೇಂಗಾ ಚಿಕ್ಕಿ, ಹಕ್ಕಿ, ರವಾ, ಇನ್ನೂ ಮುಂತಾದ ಪೌಷ್ಟಿಕ ಆಹಾರ ದೊರೆಯುವ ಬಗ್ಗೆ ಮಾಹಿತಿ ಪಡೆದುಕೊಂಡರು. ಫಲಾನುಭವಿಗಳು ಸರ್ಕಾರದ ಯೋಜನೆಗಳ ಸದುಪಯೋಗ ಪಡಿಸಿಕೊಕೊಂಡು ತಾಯಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ಶ್ರೀ ಪಾಂಡ್ವೆ ರಾಹುಲ್ ತುಕಾರಾಮ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ರಾಯಚೂರು ರವರು ಹೇಳಿದರು.
ನಂತರ ಗ್ರಾಮದ ಅಗಸೆ ಹತ್ತಿರ ಸ್ಥಾಪಿಸಲಾದ ಪುಸ್ತಕ ಗೂಡನ್ನು ವೀಕ್ಷಿಸಿದರು. ಸಲಹಾ ಪೆಟ್ಟಿಗೆ ಇಡುವಂತೆ ಕಾರ್ಯದರ್ಶಿಗೆ ತಿಳಿಸಿದರು. ಗ್ರಂಥಾಲಯಕ್ಕೆ ಭೇಟಿ ನೀಡಿ ನೊಂದಣಿ ಪುಸ್ತಕ, ಎಷ್ಟು ಮಕ್ಕಳು ಸೌಲಭ್ಯ ಪಡೆಯುತ್ತಿದ್ದಾರೆಂದು ತಿಳಿದುಕೊಂಡರು.
ಮುಂದುವರೆದು ಯರಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾಮಾಜಿಕ ಆರಣ್ಯ ವಲಯ ರಾಯಚೂರು ಗೆ ಬೇಟಿ ನೀಡಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯಡಿ ಬೆಳೆಸಿದ 10 ಸಾವಿರ ಸಸಿಗಳಾದ ಬೇವು, ಆರಳಿ, ಪತ್ರಿ, ಬಾಗೆ, ತಪ್ಪಸ್ಸಿ ಇನ್ನೂ ಮುಂತಾದ ಸಸಿಗಳನ್ನು ವೀಕ್ಷಿಸಿದರು. ಈ ಸಸಿಗಳು ಉತ್ತಮವಾಗಿ ಬೆಳೆದಿರುವ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಇವುಗಳಿಗೆ ತಕ್ಕಂತೆ ವಾರ್ಷಿಕ ಕ್ರಿಯಾ ಯೋಜನೆ ತಯಾರಿಸಿಲು ಸಾಮಾಜಿಕ ಆರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಮುಂದೆ ಹೋಗಿ ಗ್ರಾಮದಲ್ಲಿರುವ ಕೆ.ಇ.ಬಿ ಕಾಲೋನಿ ಆಂಜನೇಯ ದೇವಸ್ಥಾನ ಹತ್ತಿರ ಅನುಷ್ಠಾನಿಸುತ್ತಿರುವ ಸಂಜೀವಿನಿ ಶೇಡ್ ಕಾಮಗಾರಿಯನ್ನು ಪರಿಶೀಲಿಸಿದರು. ಈ ಕಾಮಗಾರಿಯ ಒಂದು ತಿಂಗಳದೊಳಗಾಗಿ ಗುಣ್ಣಮಟ್ಟತೆಯಿಂದ ಪೂರ್ಣಗಿಳಿಸಲು ಸಂಬಂಧಿಸಿದ ಅಧಿಕಾರಿ ಹಾಗೂ ತಾಂತ್ರಿಕ ಸಿಬ್ಬಂದಿಯವರಿಗೆ ಸೂಚನೆ ನೀಡಿದರು.
ನಂತರ ಜಂಬಲದಿನ್ನಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ವೈ ಮಲ್ಕಾಪೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಶಾಲಾ ಕಾಂಪೌಂಡ್ ಕಾಮಗಾರಿಯನ್ನು ಪರಿಶೀಲನೆ ಮಾಡಿದರು. ಸದರಿ ಕಾಮಗಾರಿಯನ್ನು ಕೂಡಲೇ ಉತ್ತಮವಾಗಿ ಪೂರ್ಣಗೊಳಿಸಿ, ಶಾಲಾ ಮಕ್ಕಳನ್ನು ಹಳೆ ಶಾಲೆಯಿಂದ ಈ ಶಾಲೆಗೆ ಸ್ಥಳಾಂತರಗೊಳಿಸಲು ತಿಳಿಸಿದರು.
ತದನಂತರ ಬಿಜನಗೇರಾ ಗ್ರಾ.ಪಂ.ವ್ಯಾಪ್ತಿಯ ಬಿಜನಗೇರಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಜೆಜೆಎಮ್ ನ ಉಳಿಕೆ ಅನುದಾನದಲ್ಲಿ ಅಳವಡಿಸಿದ ಶುದ್ದ ಕುಡಿಯುವ ನೀರಿನ ಘಟಕವನ್ನು ವೀಕ್ಷಿಸಿದರು ಗ್ರಾ.ಪಂ.ನ ಎಲ್ಲಾ ಶಾಲೆಗಳಿಗೆ ಅಳವಡಿಸಿದ ಮಾಹಿತಿಯನ್ನು ಪಡೆದುಕೊಂಡು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ : ಉಪ ನಿರ್ದೇಶ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನವೀನ ಕುಮಾರ್, ರಾಯಚೂರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾ ಚಂದ್ರಶೇಖರ ಪವಾರ್, ಸಹಾಯಕ ನಿರ್ದೇಶಕ ಹನುಮಂತ ಹಾಗೂ , ಸಿಡಿಪಿ ಮಹೇಶ ನಾಯಕ, ವಲಯ ಅರಣ್ಯ ಅಧಿಕಾರಿ ನಾಗರಾಜ, ಸಾಲಾರ್, ದೇವರಾಜ, ಪಿಡಿಒ, ತಾಂತ್ರಿಕ ಸಿಬ್ಬಂದಿಯವರು, ಹಾಗೂ ಗ್ರಾ.ಪಂ ಸಿಬ್ಬಂದಿ ವರ್ಗದವರು ಇದ್ದರು.