Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ನಲ್ ಜಲ್ ಯೋಜನೆ ಗ್ರಾಮೀಣ ಮಹಿಳೆಯರ ಸ್ವ ಸಹಾಯಕ್ಕೆ ಸಹಕಾರಿ- ರಾಹುಲ್ ತುಕರಾಂ ಪಾಂಡ್ವೆ

ನಲ್ ಜಲ್ ಯೋಜನೆ ಗ್ರಾಮೀಣ ಮಹಿಳೆಯರ ಸ್ವ ಸಹಾಯಕ್ಕೆ ಸಹಕಾರಿ- ರಾಹುಲ್ ತುಕರಾಂ ಪಾಂಡ್ವೆ

*ಗ್ರಾಮೀಣ ಕುಡಿಯುವ ನೀರು ಸರಬರಾಜು ವಿತರಣಾ‌ ಜಾಲವನ್ನು ಮಹಿಳೆಯರ ಸಾರಥ್ಯದಲ್ಲಿ ನಲ್ ಜಲ್ ಮಿತ್ರರಾಗಿ :ನಿರ್ವಹಿಸಲು ಸ್ವಸಹಾಯ ಸಂಘಗಳ ಮಹಿಳಾ ನೀರು ವಿತರಣಾ ನಿರ್ವಾಹಕರಿಗೆ ಬಹು ಕೌಶಲ್ಯ ತರಬೇತಿ ಸ್ವಾಗತಾರ್ಹ ಕ್ರಮ-ಪಾಂ

ರಾಯಚೂರು.ಡಿ.19- ಜಿಲ್ಲೆಯಲ್ಲಿ ಸಂಜೀವಿನಿ ಸ್ವ ಸಹಾಯ ಸಂಘದ ಮಹಿಳೆಯರಿಗೆ ವಿವಿಧ ತರಬೇತಿ ನೀಡಿ ಸ್ವ-ಉದ್ಯೋಗಕ್ಕೆ ಅವಕಾಶ ಕಲ್ಪಿಸುವುದರ ಮೂಲಕ ಗ್ರಾಮೀಣ ಮಹಿಳೆಯರನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲೀಕರಣಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಂ ಪಾಂಡ್ವೆ ಅವರು ಹೇಳಿದರು.
ಇಂದು ನಗರದ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆಯಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜಿಲ್ಲಾ ಅಭಿಯಾನ ನಿರ್ವಹಣಾ ಘಟಕ ಜಿಲ್ಲಾ ಪಂಚಾಯತಿ ರಾಯಚೂರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ನಲ್ ಜಲ್ ಮಿತ್ರ ಯೋಜನೆಯಡಿ ನೀರು ವಿತರಣಾ ನಿರ್ವಾಹಕರಿಗೆ ಬಹು ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಲ್ ಜಲ್ ಮಿತ್ರ ಯೋಜನೆಯಡಿ ನೀರು ವಿತರಣಾ ನಿರ್ವಾಹಕರಿಗೆ ಬಹು ಕೌಶಲ್ಯ ತರಬೇತಿ ಪಡೆಯುತ್ತಿರುವ ಮಹಿಳೆಯರು ತರಬೇತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ತರಬೇತಿಯಲ್ಲಿ ವಿತರಿಸಲಾಗುವ ಕಿಟ್ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ. ಗ್ರಾಮ ಪಂಚಾಯತಿಯಲ್ಲಿ ಕೆಲಸ ನಿರ್ವಹಿಸುವಾಗ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಪ್ರತಿ ಗ್ರಾಮ ಪಂಚಾಯತ್ ನಿಂದ ನಲ್ ಜಲ್ ,ಮಿತ್ರ ಸದಸ್ಯರನ್ನು ಸ್ವ ಸಹಾಯ ಗುಂಪಿನ ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ಈ ಸದ್ಯಸರಿಗೆ ಹದಿನೇಳು ದಿನದ ಬಹು ಕೌಶಲ್ಯ ತರಬೇತಿಯನ್ನು ನೀಡಿ ಗ್ರಾಮ ಪಂಚಾಯತ್ಗೆ ನಿಯೋಜನೆ ಮಾಡಲಾಗುವುದು. ತಾವುಗಳು ಕೆಲಸ ನಿರ್ವಹಿಸುವ ವೇಳೆಯಲ್ಲಿ ಸಮಸ್ಯೆ ಕಂಡು ಬಂದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತರಬಹುದು. ಸಮಸ್ಯೆ ಬಗೆಹರಿಯದೇ ಹೋದಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತರಬಹುದು ಎಂದರು.
ಮಹಿಳೆಯರಿಗೆ ನಲ್ಲಿ ನೀರಿನ ವಿತರಣಾ ವ್ಯವಸ್ಥೆ ಮತ್ತು ನೀರಿನ ವ್ಯವಸ್ಥೆಯ ಪ್ರಾತ್ಯಕ್ಷಿಕೆ, ನೀರಿನ ಪಂಪುಗಳ ಕಾರ್ಯ, ಪಂಪ್ಗಳ ಅಳವಡಿಕೆ, ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿ ನೀಡಲಾಗಿದೆ. ನೀರು ಸಂಪ್, ಟ್ಯಾಂಕ್ ನಲ್ಲಿ ನೀರು ನಿರ್ವಹಣೆ, ಅದರ ಕಾರ್ಯಗಳ ಬಗ್ಗೆ ಪ್ರಾಯೋಗಿಕವಾಗಿ ಕಲಿಸಲಾಗಿದೆ. ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತವಾಗಿ ತರಬೇತಿ ಹಾಗೂ ದಿನ ಭತ್ಯೆ ನೀಡಲಿದೆ ಎಂದು ತಿಳಿಸಿದರು.
ನಲ್ ಜಲ್ ಮಿತ್ರ ಯೋಜನೆಯಡಿ ನೀರು ವಿತರಣಾ ನಿರ್ವಾಹಕರಿಗೆ 40 ದಿನಗಳ ಕಾಲ ಉದ್ಯೋಗ ತರಬೇತಿ ನೀಡಲಾಗುತ್ತದೆ.ಗ್ರಾಮ ಪಂಚಾಯತ್ ಪ್ರತೀ ಅಭ್ಯರ್ಥಿಗೆ 24,790 ರೂ ಪಾವತಿಸುತ್ತದೆ. ಇದನ್ನು ಗ್ರಾಮ 15ನೇ ಹಣಕಾಸು ಆಯೋಗ ಮತ್ತು ಇತರ ಅನುದಾನಗಳಿಂದ ಪೂರೈಸಬೇಕು. ತರಬೇತಿಯ ನಂತರ, ಮಹಿಳೆಯರು ಜಲಜೀವನ್ ಮಿಷನ್ ಯೋಜನೆಗಾಗಿ ಗ್ರಾಮ ಪಂಚಾಯಿತಿಯಲ್ಲಿ ನೀರು ವಿತರಣಾ ನಿರ್ವಾಹಕರಾಗಿ ಕೆಲಸ ನಿರ್ವಹಿಸುವರು ಎಂದರು. ಇದೇ ವೇಳೆ ರಾಯಚೂರು. ಮಾನವಿ ಹಾಗೂ ಸಿರವಾರ ತಾಲ್ಲೂಕುಗಳಿಂದ 46 ನಲ್ ಜಲ್ ಮಿತ್ರ ಸದಸ್ಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಜಿ.ಹುಡೇದ್, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ವಿನೋದ ಕುಮಾರ ಗುಪ್ತ, ನಿರ್ಮಿತಿ ಕೇಂದ್ರ ಯೋಜನಾ ವ್ಯವಸ್ಥಾಪಕ ಗಣಪತಿ ಸಾಕ್ರೆ, ಲಿಂಗಸೂಗೂರು ಜಿ.ಟಿ.ಟಿ.ಸಿ ಪ್ರಾಧ್ಯಾಪಕ ಗುರುಬಸಪ್ಪ, ಸರಕಾರಿ ಕೈಗಾರಿಕ ಸಂಸ್ಥೆ ಪ್ರಾಂಶುಪಾಲ ಭೀಮಣ್ಣ, ಎನ್.ಆರ್.ಎಲ್.ಎಮ್.ಜಿಲ್ಲಾ ವ್ಯವಸ್ಥಾಪಕ ವಿಜಯ ಕುಮಾರ, ತರಬೇತಿದಾರ ನಾಗರಾಜ ಸೇರಿದಂತೆ ನೀರು ವಿತರಣಾ ನಿರ್ವಾಹಕರು ಭಾಗವಹಿಸಿದ್ದರು.

Megha News