Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ಏಕಾಏಕಿ ಖರೀದಿ ನಿಲ್ಲಿಸಿದ ವರ್ತಕರು: ರೈತರಿಂದ ದಿಡೀರ್ ರಸ್ತೆ ತಡೆ, ಆಕ್ರೋಶ

ಏಕಾಏಕಿ ಖರೀದಿ ನಿಲ್ಲಿಸಿದ ವರ್ತಕರು: ರೈತರಿಂದ ದಿಡೀರ್ ರಸ್ತೆ ತಡೆ, ಆಕ್ರೋಶ

ಸಿಂಧನೂರು. ಭತ್ತ ಕಳ್ಳತನ ಮಾಡಿ ಸ್ಥಳೀಯ ಎಪಿಎಂಸಿಯಲ್ಲಿ ಮಾರಾಟ ಹಾಗೂ ಖರೀದಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಕ್ಕಲಕೋಟೆ ಪೊಲೀಸರು ತನಿಖೆ ಆರಂಭಿಸಿದ್ದು, ರೈತರು ಹಾಗೂ ವರ್ತಕರ ನಡುವಿನ ವಾಕ್ಸಾಮ ರಕ್ಕೆ ಕಾರಣವಾಗಿದೆ.

ಕಳೆದ ಒಂದು ವರ್ಷದ ಹಿಂದೆ ತೆಕ್ಕಲಕೋಟೆ ಮೂಲಕ ವ್ಯಕ್ತಿಯೋರ್ವ ಭತ್ತವನ್ನು ಕಳ್ಳತನ ಮಾಡಿಕೊಂಡು ಸಿಂಧನೂರಿನ ಎಪಿಎಂಸಿ ವರ್ತ ಕರ ಬಳಿ ಮಾರಾಟ ಮಾಡಿದ್ದ. ಭತ್ತ ಕಳ್ಳತನದ ಬಗ್ಗೆ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಲ್ಲಿಯ ಪೊಲೀಸರು ತನಿಖೆ ಆರಂಭಿಸಿ ನಿನ್ನೆ ಕಳ್ಳನೊಂದಿಗೆ ಪೊಲೀ ಸರು ಸ್ಥಳೀಯ ಎಪಿಎಂಸಿಗೆ ಆಗಮಿಸಿ ಘಟನೆಗೆ ಸಂಬಂಧಿಸಿದಂತೆ ತಪಾಸಣೆ ನಡೆಸಿದ್ದಾರೆ. ಇದರಿಂದ ಗೊಂದಲಕ್ಕೊಳಗಾದ ವರ್ತಕರು ಸಮ ಸ್ಯೆ ಬಗೆಹರಿಯುವವರೆಗೆ ಖರೀದಿ ಮಾಡದಿರಲು ತೀರ್ಮಾನಿಸಿದ್ದಾರೆ.

ರಸ್ತೆತಡೆ: ದಿನಂಪ್ರತಿ ಎಪಿಎಂಸಿ ಮಾರುಕಟ್ಟೆಗೆ ಬಂದಂತೆ ಸೋಮವಾರ ಸಹ ರೈತರು ಭತ್ತ ಸೇರಿ ದಂತೆ ಇನ್ನಿತರ ಬೆಳೆಗಳ ಮಾರಾಟ ಮಾಡಲು ಎಪಿಎಂಸಿಗೆ ಬಂದಿದ್ದು, ರೈತರ ಯಾವ ಬೆಳೆಗ ಳನ್ನು ವರ್ತಕರು ಖರೀದಿ ಮಾಡಿಲ್ಲವೆಂದು ಹೇಳಿದ್ದರಿಂದ ಆಕ್ರೋಶಗೊಂಡು ರೈತರು, ಬೆಳೆ ಗಳನ್ನು ಹಾಕಿಕೊಂಡು ಬಂದಿದ್ದ ವಾಹನಗಳನ್ನು ಕುಷ್ಟಗಿ ರಸ್ತೆಯಲ್ಲಿ ನಿಲ್ಲಿಸಿ ರಸ್ತೆತಡೆ ನಡೆಸಿದರು. ನಂತರ ಸ್ಥಳಕ್ಕಾಗಿಮಿಸಿ ಪೊಲೀಸರು ಎಪಿಎಂಸಿ ಕಾರ್ಯದರ್ಶಿಗೆ ಮಾಹಿತಿ ನೀಡಿ ಸ್ಥಳಕ್ಕಾಗಮಿಸಿ ಸಮಸ್ಯೆ ಇತ್ಯರ್ಥಗೊಳಿಸುವಂತೆ ಹೇಳಿದರು.

ವರ್ತಕರ ಸಭೆ: ನಗರದ ಎಪಿಎಂಸಿ ಗಣೇಶ ಗುಡಿಯಲ್ಲಿ ವರ್ತಕರು, ಎಪಿಎಂಸಿ ಕಾರ್ಯ ದರ್ಶಿಗಳು ಹಾಗೂ ಪೊಲೀಸರು ಸಭೆ ನಡೆಸಿ ದರು. ಸಭೆಯಲ್ಲಿ ಬೆಳೆಗಳ ಖರೀದಿ ಸೇರಿದಂತೆ ಈಗಾಗಲೇ ನಡೆದಿರುವ ಕಳ್ಳತನ ಪ್ರಕರಣದ ಕುರಿತು ಚರ್ಚೆ ನಡೆಸಲಾಯಿತು.
ರೈತರ ತಂದಂತಹ ಬೆಳೆಗಳನ್ನು ಯಾವುದೇ ರೀತಿ ಯಲ್ಲಿ ಹಿಂದಕ್ಕೆ ಕಳುಹಿಸಬೇಡಿ. ಶುಕ್ರವಾರವರೆಗೆ ಖರೀದಿ ಮಾಡಿ ಎಂದು ಎಪಿಎಂಸಿ ಕಾರ್ಯದರ್ಶಿ ವರ್ತಕರಲ್ಲಿ ಮನವಿ‌ ಮಾಡಿದರು.
ರೈತರು ತರುವ ಬೆಳೆಗಳನ್ನು ಯಾವ ರೀತಿಯಲ್ಲಿ ಖರೀದಿಸಬೇಕು ಎನ್ನುವ ಮಾನದಂಡಗಳನ್ನು ಹಾಕಿಕೊಡಿ, ಅದೇ ರೀತಿ ಖರೀದಿ ಪ್ರಕ್ರಿಯೆ ತಕ್ಕಂತೆ ಖರೀದಿ ಮಾಡುತ್ತೇವೆ. ಇಲ್ಲವಾದರೆ ಕಳ್ಳ ತನ ಪ್ರಕರಣಗಳು ನಡೆದಾಗ ನಮಗೆ ತೊಂದರೆ ಯಾಗುತ್ತದೆ. ಶುಕ್ರವಾರದವರೆಗೆ ಖರೀದಿ ಮಾಡು ತ್ತೇವೆ. ನಂತರ ಸಮಸ್ಯೆ ಇತ್ಯರ್ಥಗೊಳಿಸದಿದ್ದರೆ ಖರೀದಿ ಬಂದ್ ಮಾಡುತ್ತೇವೆ ಎಂದು ಮನ ವೊಲಿಸಲು ಬಂದಂತಹ ಅಧಿಕಾರಿಗಳಿಗೆ ವರ್ತಕರು ತಿಳಿಸಿದರು.

 

Megha News