Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Local News

ನಂಬರ್‌ ಪ್ಲೇಟ್‌ ಅಳವಡಿಸಿದೇ ಇರುವ ವಾಹನಗಳ ವಿರುದ್ಧ ಶಿಸ್ತು ಕ್ರಮ

ನಂಬರ್‌ ಪ್ಲೇಟ್‌ ಅಳವಡಿಸಿದೇ ಇರುವ ವಾಹನಗಳ ವಿರುದ್ಧ ಶಿಸ್ತು ಕ್ರಮ

ರಾಯಚೂರು.ವಾಹನಗಳಿಗೆ ನಂಬರ್‌ ಪ್ಲೇಟ್‌ ಅಳವಡಿಸಿದೇ ಅನೇಕ ವಾಹನಗಳು ಸಂಚರಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸುವ ಕಾರ್ಯವನ್ನು ಆರಂಭಿಸಲಿದೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಎಂದು ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಕೇಂದ್ರ ಬಸ್‌ ನಿಲ್ದಾಣ, ರೈಲು ನಿಲ್ದಾಣ, ರೈಲ್ವೆ ಸ್ಟೇಷನ್‌ ಮಾರ್ಗದಲ್ಲಿ ಆಟೊ ಚಾಲಕರು ಸಂಚಾರ ನಿಯಮ ಉಲ್ಲಂಘಸಿ ನಿಲುಗಡೆ ಮಾಡುತ್ತಿರುವ ಕಾರಣ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಸಾರ್ವಜನಿಕರಿಂದಲೂ ದೂರು ಬರುತ್ತಿರುವ ಕಾರಣ ನಿಯಮ ಉಲ್ಲಂಘಿಸುವ ಆಟೊಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾಡಳಿತ ಈಗಾಗಲೇ ಆಟೊಪ್ರಯಾಣದ ನಿಗದಿಪಡಿಸಿದೆ. ಆದರೂ ಆಟೊಚಾಲಕರಿಗೆ ಹೊಸ ದರಪಟ್ಟಿ ಅನುಷ್ಠಾನಕ್ಕೆ ಜ.30ರ ವರೆಗೆ ಅವಕಾಶ ಕೊಡಲಾಗಿತ್ತು ಫೆಬ್ರುವರಿ ಮೊದಲ ವಾರದಿಂದ ಕಾರ್ಯಾಚರಣೆ ಶುರು ಮಾಡಲಾಗುವುದು’ ಎಂದು ತಿಳಿಸಿದರು.

Megha News