ರಾಯಚೂರು. ಮಳೆಗಾಲದಲ್ಲಿ ಜಲಾಶಯದಿಂದ ನದಿಗೆ ನೀರು ಬಿಡುತ್ತಿದ್ದ, ಬದಲಾಗಿ ಕಾಲುವೆಗ ಳಿಗೆ ನೀರು ಹರಿಸಿದಲ್ಲಿ ಕೆರೆ ಮತ್ತು ಕೃಷಿ ಹೊಂಡ ಗಳನ್ನು ರೈತರು ತುಂಬಿಸಿಕೊಳ್ಳಲು ಅನುಕೂಲ ವಾಗಲಿದೆ, ಜೊತೆಗೆ ಬರಗಾಲದ ಸಂದರ್ಭದಲ್ಲಿ ನೀರಿನ ಬಳಕೆ ಮಾಡಿಕೊಳ್ಳಬ ಹುದಾಗಿದೆ ಈ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಹೇಳಿದರು.
ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು,
ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾ ಣದಲ್ಲಿ ಕೃಷಿ ನೀರಾವರಿ ಪ್ರದೇಶ ವಿಸ್ತೀರ್ಣವಾಗಿದೆ, ಜಿಲ್ಲೆಯಲ್ಲಿಯೂ ಸಹ ನೀರಾವರಿ ಪ್ರದೇಶ ವಿಸ್ತೀರ್ಣವಾಗಿದ್ದು, ಕೊನೆ ಭಾಗದ ರೈತರು ನೀರು ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಜಲಾಶಯದಿಂದ ನದಿಗೆ ನೀರು ಬಿಡುವುದು ಬದಲಾಗಿ ಕಾಲುವೆಗಳಿಗೆ ಹರಿಸಿದಲ್ಲಿ ಅವಲಂಭಿತ ಕೆರೆಗಳು, ಹೊಂಡಗಳು ತುಂಬಿಸಲು ಅನುಕೂಲವಾಗಿದೆ ಎಂದು ಅಧಿಕಾರಿಗಳ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದರು.
ಕಾಲುವೆಗಳಿಗೆ ಮಳೆಗಾಲದಲ್ಲಿ ನೀರು ಹರಿಸುವ ಕುರಿತು ಜಲ ಸಂಪನ್ಮೂಲ ಸಚಿವರೊಂದಿಗೆ ಈ ಬಗ್ಗೆ ಚರ್ಚಿಸಿ ನಿರ್ಯಣ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಫಸಲ ವಿಮಾ ಇನ್ಸೂರೆನ್ಸ್ ಕಟ್ಟಲು ರೈತರು ಹಿಂದೆಟು ಹಾಕುತ್ತಿದ್ದಾರೆ, ಜಿಲ್ಲೆಯಲ್ಲಿ ಕಳೆದ ಬಾರಿ 1 ಲಕ್ಷಕ್ಕೂ ಅಧಿಕ ರೈತರು ಇನ್ಸೂರೆನ್ಸ್ ಕಟ್ಟಿದ್ದರು, ಆದರೆ ಈ ಬಾರಿ 52 ಸಾವಿರ ಮಾತ್ರ ಆಗಿದೆ, ಈ ಬಗ್ಗೆ ರೈತರಿಗೆ ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಗ್ರಾಮಗಳಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದಾಗ ಇನ್ಸೂರೆನ್ಸ್ ಬಗ್ಗೆ ಜಾಗೃತಿ ಮೂಡಿಸಿ, ಬೆಳೆ ಇನ್ಸೂರೆನ್ಸ್ ಮಾಡಿಸುವುದರಿಂದ ಹೆಚ್ಚು ಇನ್ಸೂರೆನ್ಸ್ ಬರುತ್ತೆ, ರೈತರು ಶೇ 20 ರಷ್ಟು ಕಟ್ಟಿದರೆ ಸರ್ಕಾರ ಶೇ 80 ನೀಡುತ್ತಿದೆ. ಈ ಬಗ್ಗೆ ಹೆಚ್ಚಾಗಿ ಕೃಷಿ ಇಲಾಖೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಹೆಚ್ಚಾಗಿ ರಸ ಗೊಬ್ಬರ ಬಳಕೆಯಿಂದ ಭೂಮಿಯ ಸತ್ವ ಕಳೆದುಕೊಳ್ಳುತ್ತಿದೆ, ಸಾವಯವ ಮತ್ತು ಮಿಲ್ಲೆಟ್ ಬೆಳೆಗೆ ಹೆಚ್ಚಿನ ಗಮನ ಹರಿಸಲು ತಿಳಿಸಿದರು, ಈ ಬಗ್ಗೆ ರೈತರಿಗೆ ಮನವರಿಕೆ ಮಾಡಬೇಕು, ರಾಸಾಯನಿಕ ರಸಗೊಬ್ಬರ ಬಳಕೆಯಿಂದಾಗುವ ದುಷ್ಪರಿಣಾಮ ತಿಳಿಸಿ, ಸಾವಯವ ಗೊಬ್ಬರ ಬಳಕೆ ಮಾಹಿತಿ ನೀಡಿ, ಜೊತೆಗೆ, ಮಿಲ್ಲೆಟ್ ಎಂದು ಘೋಷಣೆ ಬಳಿಕೆ ಹೆಚ್ಚಿನ ಆಧ್ಯತೆ ನೀಡಿದೆ, ರೈತರಿಗೆ ಪ್ರೋಹಿಸುವ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯತ ಸಿಇಒ ರಾಹುಲ್ ಪಾಂಡ್ವೆ ತುಕಾರಾಂ, ಎಸ್ಪಿ ಬಿ.ನಿಖಿಲ್, ಮಾನ್ವಿ ಶಾಸಕ ಹಂಪಯ್ಯ ಸಾವುಕಾರ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.