Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿ ಕೇಂದ್ರ ಸ್ಥಾಪನೆ: ಜಿಲ್ಲಾಧಿಕಾರಿ ನಿತೀಶ್ ಕೆ.

ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿ ಕೇಂದ್ರ ಸ್ಥಾಪನೆ: ಜಿಲ್ಲಾಧಿಕಾರಿ ನಿತೀಶ್ ಕೆ.

ರಾಯಚೂರ. ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ. ಗುಣಮಟ್ಟದ ಸೂರ್ಯಕಾಂತಿ ಉತ್ಪನ್ನವನ್ನು ಖರೀದಿಸಲು ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಸೌಲಭ್ಯವನ್ನು ರೈತರು ಸದುಪ್ರಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಟಾಸ್ಕ್ಪೋರ್ಸ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ನಿತೀಶ ಕೆ. ಅವರು ತಿಳಿಸಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಸೂರ್ಯಕಾಂತಿ ಉತ್ಪನ್ನವನ್ನು ಪ್ರತಿ ಎಕರಿಗೆ 3ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಎಫ್.ಎ.ಕ್ಯೂ ಗುಣಮಟ್ಟದ ಪ್ರತಿ ಕ್ವಿಂಟಾಲ್‌ಗೆ ರೂ.7,280ರಂತೆ ಬೆಂಬಲ ಯೋಜನೆಯಡಿಯಲ್ಲಿ ಖರೀದಿಸಲಾಗುವುದು. ಇದೇ 2024ರ ಆ.24ರಿಂದ ರೈತರ ನೊಂದಣಿ ಕಾಲಾವಧಿಯನ್ನು 45 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆÀ ನಿಗಧಿಪಡಿಸಲಾಗಿದೆ.
ರೈತರಿಂದ ಸೂರ್ಯಕಾಂತಿಯನ್ನು ರಾಯಚೂರು ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಹುಣಸಿಹಾಳಹುಡಾ, ಖರೀದಿ ಕೇಂದ್ರ ಕಾರ್ಯದರ್ಶಿ ಷಣ್ಮುಖ.ಜಿ ಮೊಬೈಲ್ ನಂಬರ್; 9743695467, ದೇವದುರ್ಗ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಜಾಲಹಳ್ಳಿ ಖರೀದಿ ಕೇಂದ್ರ ಕಾರ್ಯದರ್ಶಿ ನರಸಿಂಗ ನಾಯಕ ಮೊಬೈಲ್ ನಂಬರ್; 7899312989, ಲಿಂಗಸುಗೂರು ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಮಟ್ಟೂರು ಖರೀದಿ ಕೇಂದ್ರ ಕಾರ್ಯದರ್ಶಿ ವೀರೇಶ ದೇಸಾಯಿ ಮೊಬೈಲ್ ನಂಬರ್;9113649836, ಸಿಂಧನೂರು ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಜವಳಗೇರಾ ಖರೀದಿ ಕೇಂದ್ರ ಕಾರ್ಯದರ್ಶಿ ದೇವರಾಜ ಮೊಬೈಲ್ ನಂಬರ್; 9964165509 ಹಾಗೂ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಹುಡಾ ಖರೀದಿ ಕೇಂದ್ರ ಕಾರ್ಯದರ್ಶಿ ಚನ್ನನಗೌಡ ಮೊಬೈಲ್ ನಂಬರ್;9964315868, ಮಾನವಿ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ತೋರಣದಿನ್ನಿ ಖರೀದಿ ಕೇಂದ್ರ ಕಾರ್ಯದರ್ಶಿ ಬಸಯ್ಯ .ಟಿ ಮೊಬೈಲ್ ನಂಬರ್; 9902387316, ಸಿರವಾರ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಸಿರವಾರ ಖರೀದಿ ಕೇಂದ್ರ ಕಾರ್ಯದರ್ಶಿ ನಿಂಬಯ್ಯ ಸ್ವಾಮಿ ಮೊಬೈಲ್ ನಂಬರ್; 9880891919ಗಳಲ್ಲಿ ಖರಿದಿ ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರ ಬಾಂಧವರು ಫ್ರೂಟ್ಸ್ ಐ.ಡಿಯೊಂದಿಗೆ ತಮ್ಮ ಹತ್ತಿರದ ಖರೀದಿ ಕೇಂದ್ರಗಳಲ್ಲಿ ನೊಂದಾಯಿಸಿ ಸೂರ್ಯಕಾಂತಿ ಮಾರಾಟ ಮಾಡಿ ಸರ್ಕಾರದ ಯೋಜನೆಯ ಸದುಪಯೋಗ ಪರಿಡಿಸಕೊಳ್ಳಲು ಜಿಲ್ಲೆಯ ರೈತ ಬಾಂಧವರಲ್ಲಿ ಕೋರಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Megha News