ಬೆಂಗಳೂರು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮೇಲೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ಮಾಡಿದ್ದ ‘ಬ್ಲೂ ಫಿಲಂ’ ಆರೋಪ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಈ ವಿಚಾರ ರಾಜಕೀಯ ನಿವೃತ್ತಿವರೆಗೂ ತಲುಪಿದೆ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನೀಲಿ ಚಿತ್ರಗಳನ್ನು ಪ್ರದರ್ಶಿಸಿಕೊಂಡು ಬಂದವರು. ಈ ಮನಸ್ಥಿತಿಯವನಿಗೆ ಇನ್ನೇನು ಬರುತ್ತದೆ ಎಂದು ಏಕವಚನದಲ್ಲಿಯೇ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು. ಇದಕ್ಕೆ ತಿರುಗೇಟು ಕೊಟ್ಟಿದ್ದ ಡಿಕೆ ಶಿವಕುಮಾರ್ ಅವರು ಮಂಗಳವಾರ ಕುಮಾರಸ್ವಾಮಿ ಮೇಲೆ ಅವರು ಸವಾಲು ಹಾಕಿದ್ದಾರೆ.
ನನ್ನ ಒಡೆತನದಲ್ಲಿನ ಚಿತ್ರಮಂದಿರದಲ್ಲಿ (ಟೆಂಟ್) ‘ನೀಲಿ ಚಿತ್ರ’ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಎಚ್ಡಿ ಕುಮಾರಸ್ವಾಮಿ ಅವರ ಈ ಆರೋಪ ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಬೇಕಿದ್ದರೆ ಕನಕಪುರಕ್ಕೆ ಭೇಟಿ ನೀಡಿ ಕುಮಾರಸ್ವಾಮಿಯವರೇ ಸ್ವತಃ ವಿಚಾರಿಸುವಂತೆಯೂ ಶಿವಕುಮಾರ್ ಅವರು ಸವಾಲೆಸೆದಿದ್ದಾರೆ.