- ಬೆಳಗಾವಿ : ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಇಂದಿನಿಂದ ಕಾವೇರಿದ್ದು ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಇಂದಿನಿಂದ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕದ ಭಾಗದ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಯುತ್ತಿರುವಾಗ
ಕೆ.ಕೆ.ಆರ್.ಡಿ.ಬಿಯ ಅಧ್ಯಕ್ಷರಾದ ಅಜಯ್ ಸಿಂಗ್ ವಿವಿಧ ಅನುದಾನದ ಕುರಿತಂತೆ ಚರ್ಚೆ ನಡೆಸುತ್ತಿರುವಾಗ ರಾಯಚೂರು ನಗರ ಶಾಸಕರಾದ ಡಾ.ಶಿವರಾಜ್ ಪಾಟೀಲರು ಮಾತನಾಡಿ ಕೆ.ಕೆ.ಆರ್.ಡಿ ಮಂಡಳಿಯಲ್ಲಿ ಕೇವಲ ಆಡಳಿತರೂಡ ಪಕ್ಷದ ಸದಸ್ಯರು ಮಾತ್ರ ಸದಸ್ಯತ್ವವನ್ನು ನೀಡಿದ್ದು ಪ್ರತಿ ಬಾರಿ ಕಲಬುರಗಿಯಲ್ಲಿ ನಡೆಯುವ ಸಭೆಯಲ್ಲಿ ಆಡಳಿತ ಪಕ್ಷದವರು ಮಾತ್ರ ಭಾಗವಹಿಸುತ್ತಾರೆ ಇದರಿಂದ ಅಲ್ಲಿ ನಡೆಯುವ ಚರ್ಚೆಯಿಂದ ವಂಚಿತರಾಗುತ್ತಿದ್ದು ಎಲ್ಲಾ ಪಕ್ಷದ ಸದಸ್ಯರಿಗೆ ಮಂಡಳಿಯಲ್ಲಿ ಸ್ಥಾನ ನೀಡುವಂತೆ ಕಾನೂನು ಸಚಿವರಿಗೆ ಮನವಿ ಮಾಡಿದರು.
ನಂಜುಡಪ್ಪ ವರದಿ ಕುರಿತಂತೆ ಗೊಂವೀದಪ್ಪ ನೇತೃತ್ವದಲ್ಲಿ ಸಮಿತಿ ನೀಡುವ ವರದಿ ಆಧಾರದಮೇಲೆ ಅನುದಾನ ಹಂಚಿಕೆ ಅನ್ಯಾಯ ಸರಿಪಡಿಸುವದಾಗಿ ಕೆಕೆಆರಡಿಬಿ ಅದ್ಯಕ್ಷ ಅಜಯಸಿಂಗ್ ಹೇಳಿದರು. ಅನುದಾನ ಹಂಚಿಕೆ ತಾರತಮ್ಯದ ಕುರಿತು ಕಾಂಗ್ರೆಸ ಪಕ್ಷದ ಶಾಸಕ ಅಲ್ಮಂಪ್ರಭು ಪಾಟೀಲ್ ಸಹ ಅಸಮಧಾನ ವ್ಯಕ್ತಪಡಿಸಿದರು