Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Local News

ನೂರು ದಿನ ಕ್ಷಯರೋಗ ಅಭಿಯಾನಕ್ಕೆ ಚಾಲನೆ: ಕ್ಷಯರೋಗ ಮುಕ್ತ ಸಮಾಜ ನಿರ್ಮಾಣ ಮಾಡಲು ಸಹಕರಿಸಿ- ಡಾ. ಸುರೇಂದ್ರಬಾಬು

ನೂರು ದಿನ ಕ್ಷಯರೋಗ ಅಭಿಯಾನಕ್ಕೆ ಚಾಲನೆ: ಕ್ಷಯರೋಗ ಮುಕ್ತ ಸಮಾಜ ನಿರ್ಮಾಣ ಮಾಡಲು ಸಹಕರಿಸಿ- ಡಾ. ಸುರೇಂದ್ರಬಾಬು
  • ರಾಯಚೂರು. ಕ್ಷಯ ರೋಗ ಹೆಚ್ಚಿರುವ ಜಿಲ್ಲೆಗಳಲ್ಲಿ 100 ದಿನಗಳ ಕಾಲ ಅಭಿಯಾನದ ಮೂಲಕ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರದ ಕಾರ್ಯಕ್ರಮ ರೂಪಿಸಿದೆ ಪ್ರತಿದಿನ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬರು ಕೆಲಸ ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ವೈ.ಸುರೇಂದ್ರ ಬಾಬು ಹೇಳಿದರು.
    ನಗರದ ಚಂದ್ರಬಂಡಾ ರಸ್ತೆಯಲ್ಲಿರುವರು ನಮ್ಮ ಕ್ಲಿನಿಕ್ ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮ ವತಿಯಿಂದ ಏರ್ಪಡಿಸಿದ 100 ದಿನಗಳ ಕ್ಷಯರೋಗ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಕೇಂದ್ರ ಸರ್ಕಾರದ ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲಿ ಹೆಚ್ಚು ಕ್ಷಯರೋಗಿಗಳು ಇದ್ದಾರೆ, ಆ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು 100 ದಿನಗಣಲವರೆಗೆ ಕ್ಷಯರೋಗಕ್ಕೆ ಸಂಬಂದಿಸಿದ ಅಭಿಯಾನ, ಜಾಗೃತಿ, ಕಾರ್ಯಕ್ರಮ ಸೇರಿ ಇತರೆ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸು ವ ಕೆಲಸ ಮಾಡಲು ತಿಳಿಸಿದೆ ಎಂದರು.
    ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಕ್ಷಯರೋಗ ರೋಗದ ಬಗ್ಗೆ ಮಾಹಿತಿ ಸಂಗ್ರಹಿಸಿಲು ಅಂಗನ ವಾಡಿ, ಆಶಾ ಕಾರ್ಯಕರ್ತೆಯರು, ಅಧಿಕಾರಿ ಗಳು ಸೇರಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
    ಕ್ಷಯರೋಗದ ಲಕ್ಷಣಗಳು ಕಂಡು ಬಂದಲ್ಲಿ ಆರಂಭದಲ್ಲಿಯೇ ಚಿಕಿತ್ಸೆಯನ್ನು ನೀಡುವ ಮೂಲಕ ಆರೈಕೆ ಮಾಡಲಾಗುತ್ತಿದೆ,
    ಕ್ಷಯರೋಗ ಒಂದು ವಿಶೇಷ ಕ್ರಿಮಿಕೋಟದಿಂದ ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆಯಾ ಗಿದೆ, ಕ್ಷಯರೋಗದ 5 ಲಕ್ಷಣಗಳು ಯಾವುದಾ ದೂ ಒಂದು ಅಥವಾ ಎರಡು ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಆರೋಗ್ಯ ಕೇಂದ್ರಕ್ಕೆ ಬೇಡಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
    ರೋಗದ ಲಕ್ಷಣಗಳು ಕಂಡು ಬಂದು ತಕ್ಷಣದಲ್ಲಿ ಚಿಕಿತ್ಸೆ ಪಡೆಯದೇ ಇದ್ದಲ್ಲಿ ಗುಣಮುಖರಾಗಲು ಸಮಯ ಹೆಚ್ಚಾಗುತ್ತದೆ, ಕ್ಷಯರೋಗ ರೋಗದಿಂದ ಗುಣಮುಖರಾಗಲು ಕನಿಷ್ಟ 6 ತಿಂಗಳವರೆಗೆ ಚಿಕಿತ್ಸೆ ಪಡೆದುಕೊಳ್ಳಬೇಕು, ಇದರಿಂದ ಶೇ 90 ರಷ್ಟು ಗುಣಮುಖರಾಗಲು ಸಾಧ್ಯವೆಂದರು.
    ಕ್ಷಯ ರೋಗಕ್ಕೆ ಚಿಕಿತ್ಸೆ ನಿರಂತರವಾಗಿ ಪಡೆದಕೊಳ್ಳದೇ ಇದ್ದಲ್ಲಿ ಜೀವನ ಪರ್ಯಾಯ ಕ್ಷಯರೋಗರೋಗಗಳಾಗಬಹುದು, ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೇ ತಕ್ಷಣದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
    ಅತಿಥಿಯಾಗಿ ಮಾತನಾಡಿದ ತಾಲೂಕಾ ಆರೋಗ್ಯ ಅಧಿಕಾರಿ ಡಾ.ಶಾಕೀರ ಮಾತನಾಡಿ ಮಾರ್ಚ೧೨ ವರೆಗೆ ನಡೆಯಲಿರುವ ಅಭಿಯಾನದಲ್ಲಿ ೬೦ ವರ್ಷಮೇಲ್ಪಟ್ಟವರು,ಮಧುಮೇಹ,ರಕ್ತದೋತ್ತಡದಿಂದ ಬಳಲುತ್ತಿರುವವರನ್ನ ಪರೀಕ್ಷೆ ಮಾಡಲಾಗುತ್ತದೆ. ಕ್ಷಯರೋಗ ಲಕ್ಷಣಗಳಿದ್ದಲ್ಲಿ ಎಕ್ಸರೇ ಮಾಡಿಸಿ ಲಕ್ಷಣಗಳು ಕಂಡು ಬಂದರೆ ಚಿಕ್ಸಿತೆ ಕೊಡಿಸಲಾಗುತ್ತದೆ. ಆರೋಗ್ಯ ಸಹಾಯಕರು ಹಾಗೂ ಆಶಾ ಕಾರ್ಯಕರ್ತೆ ಯರು ಅಭಿಯಾನ ಯಶಸ್ಸು ಗೊಳಿಸಲು ಸಹಕರಿಸಬೇಕು ಎಂದರು‌ ಕಾರ್ಯಕ್ರಮದಲ್ಲಿ ಡಾ. ನಂದಿತಾ,ಡಾ.ಗಣೇಶ ಸೇರಿದಂತೆ ಅರೋಗ್ಯ ಇಲಾಖೆಯ ಸಿಬ್ಬಂದಿ, ಆಶಾಕಾರ್ಯಕರ್ತರು ಭಾಗವಹಿಸಿದ್ದರು.
Megha News