ರಾಯಚೂರು. ರಾಜ್ಯದಲ್ಲಿ ಬರ ಆವರಿಸಿದ್ದು ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿಗಾಗಿ 890 ಕೋಟಿ ಬಿಡುಗಡೆ ಮಾಡಿದ್ದು, ತಾಲೂಕವಾರು ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸಿ, ಆದ್ಯತೆ ಮೆರೆಗೆ ಅನುದಾನ ಆಯಾ ತಾಲೂಕಗಳಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜ ಹೇಳಿದರು.
ರಾಯಚೂರಿನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು,
ರಾಜ್ಯದಲ್ಲಿ ಬರ ಹಿನ್ನೆಲೆಯಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಒದಗಿಸಲು 890 ಕೋಟಿ ಬಿಡುಗಡೆ ಮಾಡಿದೆ, ಆಯಾ ಜಿಲ್ಲೆಯಲ್ಲಿ ಹಾಗೂ ತಾಲೂಕುಗಳಲ್ಲಿ ಶಾಸಕರು ತಹಶಿಲ್ದಾರರ ಟಾಸ್ಕ್ ಪೋರ್ಸ್ ಸಭೆ ನಡೆಸಿ ಕ್ರಿಯಾ ಯೋಜನೆ ಸಿದ್ದಪಡಿಸಿ ಸಲ್ಲಿಸಬೇಕು, ಜಿಲ್ಲಾಧಿಕಾರಿಗಳ ಮೂಲಕ ಆಯಾ ತಾಲೂಕು ಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದರು.
ನಗರದಲ್ಲಿ 340 ಬೋರ್‌ವೆಲ್‌ಗಳಿದ್ದು, ಅವುಗಳಲ್ಲಿ 240 ಮಾತ್ರ ಚಾಲನೆಯಲ್ಲಿವೆ, ಉಳಿದ ಬೋರ್‌ವೆಲ್‌ಗಳು ದುರಸ್ತಿಗೊಳಿಸಲು ನಗರಸಭೆ ಪೌರಾಯುಕ್ತರಿಗೆ ಸೂಚಿಸಲಾಗಿದೆ ಎಂದರು.
ನಗರಕ್ಕೆ ಕುಡಿಯುವ ನೀರಿನ ಸಂಭವಿಸಿದಂತೆ ರಾಂಪೂರ ಜಲಾಶಯದಲ್ಲಿ 3.5 ಮೀಟರ್ ನೀರು ಸಂಗ್ರಹವಿದ್ದು, ಗಣೇಕಲ್ ಜಲಾಶಯದ ಲ್ಲಿ ನೀರಿನ ಲಭ್ಯತೆ ಇದೆ, ರಾಂಪೂರ ಜಲಾಶಯ ದಲ್ಲಿ ಕಡಿಮೆಯಾದಲ್ಲಿ ತುಂಬಿಸುವ ಕೆಲಸ ಮಾಡಲಾಗುತ್ತದೆ, ಫೆಬ್ರವರಿ ತಿಂಗಳಲ್ಲಿ ತುಂಗಭದ್ರಾ ಜಲಾಶಯದಿಂದ ಕುಡಿಯುವ ನೀರಿಗಾಗಿ ಕಾಲುವೆಗೆ ಹರಿಸಲು ಮುಖ್ಯಮಂತ್ರಿ ಜೊತೆ ಮಾತನಾಡಲಾಗಿದೆ ಎಂದು ತಿಳಿಸಿದರು.
ಕೃಷ್ಣ ನದಿಯಿಂದ ನಗರಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೀಡಿಕೊಳ್ಳಲಾಗುವುದು, ಈ ಹಿಂದೆ ನಿತ್ಯ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ಅದರಂತೆ ಒದಗಿಸಲು ಕ್ರಮ ವಹಿಸಲಾಗುತ್ತದೆ ಎಂದು ಅವರು, ನಗರದಲ್ಲಿ ವಿದ್ಯುತ್ ದೀಪಗಳ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ಆಗಿದ್ದು, ಎಲ್ಲಾ ಕಡೆ ವಿದ್ಯುತ್ ಸಮಸ್ಯೆಯಾಗದಂತೆ ವಿದ್ಯುತ್ ದೀಪ ಅಳವಡಿಸುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ಹಿರಿಯ ನಗರ ಸಭೆ ಸದಸ್ಯ ಜಯಣ್ಣ, ಶಾಂತಪ್ಪ, ಜಿಂದಪ್ಪ, ಬಸವರಾಜರಡ್ಡಿ, ರಮೇಶ, ಭೀಮರಾಯ್, ಶಾಂತಪ್ಪ, ನರಸಿಂಹಲು ಮಾಡಗಿರಿ, ಆಂಜನೇಯ್ಯ ಕಡಗೋಲ್, ದರೂರ್ ಬಸವರಾಜ್ ಸೇರಿದಂತೆ ಅನೇಕರು ಇದ್ದರು.