ರಾಯಚೂರು. ಸಾರಿಗೆ ಬಸ್‌ಗೆ ಬೈಕ್ ಸವಾರ ಅಡ್ಡ ಬಂದಿದ್ದರಿಂದ ಅದೃಷ್ಟವಶಾತ್ ಪ್ರಾಣಪಾ ಯದಿಂದ ತಪ್ಪಿಸಿಕೊಂಡಿರುವ ಘಟನೆ ಸಿರವಾರ ತಾಲೂಕಿನ ಅತ್ತನೂರು ಗ್ರಾಮದ ಹೊರವಲಯ ದ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಬೈಕ್ ನಲ್ಲಿ ಹೋಗುತ್ತಿದ್ದವರು ನಿಲೋಗಲ್ ಕ್ಯಾಂಪಿನ ನಿವಾಸಿಗಳಾದ ನಾರಾಯಣ, ಕಾರ್ತಿಕ, ಇವರು ತಂದೆ ಮಗ ಎಂದು ತಿಳಿದು ಬಂದಿದೆ.
ಇವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಬಸ್ ಗದ್ದೆಗೆ ನುಗ್ಗಿದ್ದರಿಂದ ಪ್ರಯಾಣಿಕರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ.
ಬೈಕ್ ಸವಾರ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಹೋಗುತ್ತಿರುವಾಗ ಬಸ್ ಬರುತಿರುವುದನ್ನು ಗಮನಿಸದೇ ತೆರಳಿದ್ದು, ರಾಜ್ಯ ಹೆದ್ದಾರಿಯಲ್ಲಿ ಬರುತಿರುವ ಬಸ್ ಗಮನಿಸದೇ ಹೋಗಿದ್ದು, ಒಂದು ಬಸ್ ಮತ್ತೊಂದು ಬಸ್‌ಗೆ ಸೈಡ್ ಕೊಟ್ಟ ಹೋಗುತ್ತಿದ್ದು, ಇದನ್ನು ಗಮನಿಸದ ಬೈಕ್ ಚಾಲಕ ಒಂದು ಬಸ್ಸಿನಿಂದ ಪಾರಾಗಿದ್ದು ಮತ್ತೊಂದು ಬಸ್ ಡಿಕ್ಕಿ ಹೊಡೆದಿದೆ, ಚಾಲಕನ ಸಮಯಪ್ರಜ್ಞೆಯಿಂದ ಬಸ್ ಗದ್ದೆಗೆ ಇಳಿಸಿದ್ದಾನೆ, ಬಸ್‌ನಲ್ಲಿದ್ದ 20 ಜನ ಪ್ರಯಾಣಿಕರಿಗೆ ಯಾವುದೇ ರೀತಿಯ ಅನಾಹುತ ಆಗಿಲ್ಲ, ಬೈಕ್ ಸವಾರಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ, ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಕುರಿತು ಸಿರವಾರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.