ರಾಯಚೂರು: ಇತ್ತೀಚಿಗೆ ನಗರದ ಸ್ಟೇಷನ್ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತದಿಂದ ಎಚ್ಚತ್ತಕೊಂಡಿರುವ ನಗರಸಭೆ ಮತ್ತು ಸಂಚಾರಿ ಪೊಲೀಸರು ಸ್ಟೇಷನ್ ರಸ್ತೆಯಲ್ಲಿ ಪಾದಚಾರಿ ರಸ್ತೆಗಳ ಅತಿಕ್ರಮಣಮಾಡಿರುದನ್ನು ಇಂದು ಮಳೆಯಲ್ಲಿಯೇ ತೆರವುಗೊಳಿಸಿದರು.
ರಾಷ್ಟ್ರೀಯ ಹೆದ್ದಾರಿ ಎಂದು ಹೇಳಿಕೊಳ್ಳುವ ರಸ್ತೆಯಲ್ಲಿ ಪಾದಾಚಾರಿ ರಸ್ತೆಯನ್ನು ವ್ಯಾಪಾರಸ್ಥರು ಅತಿಕ್ರಮಣ ಮಾಡಿದ್ದು ಪರ್ಯಾಯ ವ್ಯವಸ್ಥೆಗೆ ನಗರಸಭೆ ಮುಂದಾಗದೇ ಇರುವದರಿಂದ ವ್ಯಾಪಾರಸ್ಥು ನಗರಸಭೆ ಸದಸ್ಯರು,ಸಿಬ್ಬಂದಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ವ್ಯಾಪಾರ ನಡೆಸುತ್ತಾಬಂದಿದ್ದರು.ಅನೇಕಬಾರಿ ತೆರವು ಪ್ರಹಸನನಡೆದರೂ ಮತ್ತೆ ಮತ್ತೆ ಗೂಡಂಗಡಿಗಳು ಪಾದಾಚಾರಿ ರಸ್ತೆಗಳನ್ನು ಅತಿಕ್ರಮಿಸಿಕೊಂಡಿದ್ದವು. ಇಂದು ಡಾ.ಬಾಬು ಜಗಜೀವನರಾಂ ವೃತ್ತದಿಂದ ಪಾದಚಾರಿ ರಸ್ತೆಯಲ್ಲಿ ಹೋಟೆಲ್, ಹಣ್ಣು ವ್ಯಾಪಾರಿಗಳು ಸೇರಿ ಅಂಗಡಿಗಳನ್ನು ನಗರಸಭೆ ವಾಹನದಲ್ಲಿ ಹಾಕಿಕೊಂಡು ಹೋಗಲಾಯಿತು. ಏಕಾಎಕಿ ತೆರವಿಗೆ ಮುಂದಾಗಿರುವದನ್ನು ಅನೇಕ ವ್ಯಾಪಾರಸ್ಥರು ವಿರೋಧಿಸಿದರು. ಅತಿಕ್ರಮಿಸಿರುವದಕ್ಕೆ ನೋಟಿಸ್ ನೀಡಿ ತೆರವುಗೊಳಿಸಲು ಸಾಧ್ಯವಿಲ್ಲ. ನಿಮಗೆ ಯಾರು ಪರವಾನಿಗೆ ನೀಡಿಲ್ಲ ಎಂದು ನಗರಸಭೆ ಅಧಿಕಾರಿಗಳು ನಗರ ಸಂಚಾರಿ ಪೊಲೀಸ್ ನೆರವಿನೊಂದಿಗೆ ತೆರವುಗೊಳಿಸಲಾಯಿತು.
ಸ್ಟೇಷನ್ ರಸ್ತೆಯಲ್ಲಿ ಕಾರೊಂದು ವೇಗವಾಗಿ ಢಿಕ್ಕಿ ಹೊಡೆದ ವಾಹನ ಚಾಲಕ ಹಾಗೂ ಕಾಲೇಜು ವಿದ್ಯಾರ್ಥಿನಿಯೊಬ್ಬರು ಆಶ್ಚರ್ಯಕರ ರೀತಿಯಲ್ಲಿ ಜೀವಪಾಯದಿಂದ ಪಾರಾಗಿದ್ದರು.
ಸ್ಟೇಷನ್ ರಸ್ತೆಯಲ್ಲಿ ಹೆಜ್ಜೊಗೊಂದು ಬಾರ್‌ಗಳು, ರಸ್ತೆಯಲ್ಲಿ ವಾಹನ ನಿಲ್ಲಿಸುವದು ನಿಯಂತ್ರಣವಿಲ್ಲದೇ ಮುಂದುವರೆದಿತ್ತು. ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಳವಾಗುತ್ತಿದ್ದು ಅಪಘಾತಗಳು ಹೆಚ್ಚಾಗಲು ಕಾರಣವಾಗಿತ್ತು. ಸಿಎಂಸಿ ಅಧಿಕಾರಿಗಳ ಎಸ್‌ಐ ವೆಂಕಟೇಶ, ನಗರಸಭೆಯ ಬಾಬಾ ಖಾನ್, ಎಎಸ್‌ಐ ಬಷೀರ ಅಹ್ಮದ ಸೇರಿದಂತೆ ಸಿಎಂಸಿ ಸಿಬ್ಬಂದಿಗಳು, ಪೊಲೀಸರು ಇದ್ದರು.