ರಾಯಚೂರು. ನೇತ್ರದಾನ ಮಾಡಲು ಸಾಕಷ್ಟು ಜನರು ಮುಂದೆ ಬರುವುದಿಲ್ಲ ನೇತ್ರದಾನ ಮಹತ್ಮದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ದೇಹದಲ್ಲಿರುವ ಪ್ರಮುಖ ಅಂಗಾಂಗಗಳನ್ನು ದಾನ ಮಾಡಲು ಮುಂದೆ ಬರಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಸುರೇಂದ್ರ ಬಾಬು ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂದತ್ವ ನಿಯಂತ್ರಣ ಸಂಘ, ರಾಷ್ಟ್ರೀಯ ದೇಹಾಂಗ ದಾನ ಜಾಗೃತಿ ಸಮಿತಿ, ಲಯನ್ಸ್ ಕ್ಲಬ್, ರಿಮ್ಸ್ ಆಸ್ಪತ್ರೆ, ನವೋದಯ ಮೆಡಿಕಲ್ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ 38ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯ ಕ್ರಮ, ಹಾಗೂ ಮರಣ ನಂತರ ನೇತ್ರದಾನ ಮಾಡಿದ ಮಹನೀಯರ ಪರಿವಾರದ ಸದಸ್ಯರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು,
ದಾನಗಳಲ್ಲಿ ಮಹತ್ವದ ದಾನವಾಗಿರುವ ನೇತ್ರ ದಾನ, ರಕ್ತದಾನ ಮತ್ತು ಇತರೆ ಅಂಗಾಗ ದಾನ ಗಳು, ನೇತ್ರದಾನ ಮಾಡುವುದರಿಂದ ಕಣ್ಣು ಕಳೆದುಕೊಂಡವರಿಗೆ ದಾನ ಮಾಡಿದಲ್ಲಿ ಪ್ರಪಂ ಚವನ್ನು ನೋಡಬಹುದು, ಕತ್ತಲನ್ನು ನಿವಾರಣೆ ಮಾಡಿ ಮತ್ತೊಂದು ಜಗತ್ತನ್ನು ನೋಡುವುದಕ್ಕೆ ಅವಕಾಶವನ್ನು ಮಾಡದಂತೆ, ನೇತ್ರದಾನದ ಮಹತ್ವವನ್ನು ಪ್ರತಿಯೊಬ್ಬರು ತಿಳಿದುಕೊಳ್ಳ ಬೇಕಾಗಿದೆ ಎಂದರು.
ನೇತ್ರದಾನದ ಬಗ್ಗೆ ಕಳೆದ 38 ವರ್ಷಗಳಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸುತ್ತಿದ್ದು, ಈ ಬಗ್ಗೆ ಸಾರ್ವಜನಿಕ ಇದರ ಮಹತ್ವ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೇತ್ರ ವಿಭಾಗದ ಮುಖ್ಯಸ್ಥ ಡಾ.ಸಿದ್ದೇಶ, ಹೃದಯ ರೋಗ ತಜ್ಞ ಸುರೇಶ, ಇಲಾಖೆ ವೆಂಕಟೇಶ ನಾಯಕ, ಡಾ.ಯಶೋದಾ,
ಡಾ.ಶಾಕೀರ್, ಡಾ.ಗಣೇಶ, ರಾಜೇಂದ್ರ ಶಿವಾಳೆ ಸೇರಿದಂತೆ ಅನೇಕರು ಇದ್ದರು.