ರಾಯಚೂರು. ಮದ್ಯ ಮಾರಾಟ ಮಳಿಗೆಯಲ್ಲಿ ಅನಧಿಕೃತವಾಗಿ ಕುಳಿತು ಕೊಳ್ಳುವ ವ್ಯವಸ್ಥೆ ಮಾಡಿದರ ಜೊತೆಗೆ ಅಬಕಾರಿ ಕಾಯ್ದೆ ಸಿಎಲ್-2 ಉಲ್ಲಂಘನೆ ಮಾಡಿದ ಮಂಜುನಾಥ ವೈನ್ ಅಂಗಡಿ ಮೇಲೆ ಅಬಕಾರಿ ಇಲಾಖೆ ಡಿಎಸ್‌ಪಿ ಮಾನಪ್ಪ ನೇತೃತ್ವದಲ್ಲಿ ದಾಳಿ ನಡೆಸಿ ಮದ್ಯ ಮಾರಾಟ ಅಂಗಡಿ ವಿರುದ್ಧ ದೂರು ದಾಖಲಿಸಿದರು.
ನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಮಂಜುನಾಥ ವೈನ್ ಮದ್ಯ ಮಾರಾಟ ಮಳಿಗೆ ಯ ಕುರಿತು ಅಂಬೇಡ್ಕರ್ ಸೇನೆ ಸಂಘಟನೆ ದೂರು ನೀಡಿದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.
ಮಂಜುನಾಥ ವೈನ್ ಮದ್ಯ ಮಾರಾಟ ಮಳಿಗೆಯಲ್ಲಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ, ಆದರೆ ಮಳಿಗೆ ಮೇಲ್ಭಾಗದಲ್ಲಿ ಹಾಗೂ ಒಳಭಾಗದಲ್ಲಿ 30ಕ್ಕೂ ಅಧಿಕ ಕುರ್ಚಿಗಳನ್ನು ಹಾಕಿ ಮದ್ಯ ಸೇವನೆಗೆ ಅವಕಾಶ ಮಾಡಲಾಗಿದೆ, ಮದ್ಯ ಖರೀದಿಗೆ ಬಂದ ಗ್ರಾಹಕರಿಗೆ ಮದ್ಯ ಖರೀದಿಸಿ ರಸೀದಿ ನೀಡಿಲ್ಲ ಜೊತೆಗೆ ದಬಾರಿ ಬೆಲೆ ಮಾರಾಟ ಮಾಡಿದ್ದಾರೆ.
ಮಳಿಗೆಯಲ್ಲಿ ಮದ್ಯದ ದರ ಪಟ್ಟಿ ಅಳವಡಿ ಸಬೇಕು, ಅಳವಡಿಸದೇ ನಿಯಮ ಉಲ್ಲಂಘನೆ ಮಾಡಲಾಗಿದೆ, ಮಳಿಗೆಯಲ್ಲಿ ಒಂದೇ ದ್ವಾರದ ಮೂಲಕ ಮಾರಾಟಕ್ಕೆ ಅವಕಾಶ ಮಾಡದೇ ಮಳಿಗೆ ಹತ್ತಿರ ಹಾಗೂ ಮೇಲ್ಭಾಕ್ಕೆ ತೆರಳಲು ವ್ಯವಸ್ಥೆ ಮಾಡಿದ್ದಾರೆ.
ಗ್ರಾಹಕರಿಗೆ ಮಾರಾಟ ಮಾಡಿದ ರಸೀದಿ ಹಾಗೂ ನಿತ್ಯ ಮಾರಾಟದ ಕುರಿತು ದಾಖಲೆ ಪುಸ್ತಕವಿಲ್ಲ,
ಮಂಜುನಾಥ ಮದ್ಯದ ಅಂಗಡಿ ಮಾಲೀಕ ಸಂಪತ್ ಕುಮಾರ ವಿರುದ್ಧ ಅಬಕಾರಿ ನಿಯಯ ಉಲ್ಲಂಘನೆಯಡಿಯಲ್ಲಿ ದೂರು ದಾಖಲು ಮಾಡಲಾಗುವುದು ಎಂದು ಅಬಕಾರಿ ಇಲಾಖೆ ಡಿಎಸ್‌ಪಿ ಮಾನಪ್ಪ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಬಕಾರಿ ಇಲಾಖೆ ಸಬ್ ಇನ್ಸ್ಪೆಕ್ಟರ್ ಮಾರುತಿ, ಮತ್ತು ಸಿಬ್ಬಂದಿಗಳು ಹಾಗೂ ದೂರುದಾರ ವಿಶ್ವನಾಥ ಪಟ್ಟಿ ಇದ್ದರು.