ಮಾನ್ವಿ: ಸಾಲಬಾದೆಯಿಂದ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ತಾಲೂಕಿನ ಜಿನೂರು ಕ್ಯಾಂಪಿನಲ್ಲಿ ನಡೆದಿದೆ.ಆತ್ಮಹತ್ಯೆಗೆ ಶರಣಾದ ರೈತ ಯಮುನಪ್ಪ (35) ಎಂದು ತಿಳಿದು ಬಂದಿದೆ.ಕೃಷಿಗಾಗಿ ಮಾಡಿದ ಸಾಲಬಾದೆ ತಾಳದೆ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ. ಯಮುನಪ್ಪ ಕಳೆದ 8 ವರ್ಷಗಳಿಂದ ಸ್ವಂತ ಜಮೀನಿನಲ್ಲಿ ಕೃಷಿಯಲ್ಲಿ ತೊಡಗಿಕೊಂಡು ಬೆಳೆನಷ್ಟ ಅನುಭವಿಸಿದ್ದ ಎಂದು ತಿಳಿದು ಬಂದಿದೆ. ಪೋತ್ನಾಳ ಗ್ರಾಮದಲ್ಲಿನ ಪ್ರಗತಿ ಗ್ರಾಮೀಣ ಬ್ಯಾಂಕ್ ನಲ್ಲಿ 3 ಲಕ್ಷ ಬೆಳೆ ಸಾಲ ಮಾಡಿದ್ದ. ಈ ಬಾರಿಯೂ ಕೂಡ ಬೆಳೆ ನಷ್ಟವಾಗುವುದು ಅರಿತು ಯಮುನಪ್ಪ ಬೆಳೆ ನಷ್ಟದಿಂದ ಸಾಲ ತೀರಿಸಲಾಗದೆ ಮನೆಯಲ್ಲಿ ಮಲಗಿದಾಗ ಬೆಳಗಿನ ಜಾವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನಿಗೆ ಪತ್ನಿ ಗೌರಮ್ಮ ಇದ್ದಾಳೆ. ಈ ಕುರಿತು ಮಾನ್ವಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Megha News > Crime News > ಸಾಲಬಾದೆ ತಾಳದೆ ರೈತ ಆತ್ಮಹತ್ಯೆ.