ರಾಯಚೂರು,ಫೆ.೨೧-ರಾಜಕೀಯ ಪ್ರಭಾವದಿಂದ ಜಮೀನು ಒತ್ತುವರಿ ಮಾಡಿ ಗುಂಡಾಗಿರಿ ಪ್ರದರ್ಶಿಸುತ್ತಿರನ್ನು ಕವಿತಾಳ ಪೊಲೀಸರ ಕ್ರಮವ ವಿರೋಧಿಸಿ ದಯಾಮರಣ ನೀಡುವಂತೆ ಡಿಸಿ ಮನೆ ಮುಂದೆ ಗುರುವಾರ ರಾತ್ರಿ ಕುಟುಂಬ ಒಂದು ಪ್ರತಿಭಟನೆ ನಡೆಸಿತು.
ಮಸ್ಕಿ ತಾಲೂಕಿನ ತೋರಣದಿನ್ನಿ ಗ್ರಾಮದ ಹನುಮಂತ ಎಂಬುವವರಿಗೆ ಸೇರಿದ ನಿವೇಶನದಲ್ಲಿ ಮಾಜಿ ಶಾಸಕ ಪ್ರತಾಪಗೌಡ ಬೆಂಬಲಿಗ ದುರ್ಗಾಪ್ರಸಾದ ದಬ್ಬಾಳಿಕೆ ಮಾಡಿ ನಿವೇಶನದಲ್ಲಿ ಕಸ ಹಾಕಿ ಒತ್ತುವರಿ ಮಾಡಿದ್ದಾರೆ.ತೆರವುಗೊಳಿಸಲು ಕೇಳಿದರೆ ಬೆದರಿಸುತ್ತಿದ್ದಾರೆ.ಕವಿತಾಳ ಪೊಲೀಸರಿಗೆ ದೂರು ನೀಡಿದರು ರಕ್ಷಣೆ ನೀಡುತ್ತಿಲ್ಲ.ಭಯದಲ್ಲಿ ಜೀವನ ನಡೆಸುತ್ತಿದ್ದು ರಕ್ಷಣೆ ನೀಡಿ ಇಲ್ಲ ಕುಟುಂಬ ಸಮೇತ ಸಾಯಲು ಅವಕಾಶ ನೀಡುವಂತೆ ಪತ್ನಿ ಮತ್ತು ಮಕ್ಕಳೊಂದಿಗೆ ಧರಣಿ ನಡೆಸಿದರು.ಪೊಲೀಸರು ಮದ್ಯಪ್ರವೇಶಿಸಿ ಕ್ರಮ ಭರವಸೆ ನೀಡಿದ್ದಾರೆ.