ಮಸ್ಕಿ. ತುಂಗಭದ್ರಾ ಎಡದಂಡೆ ವಿತರಣೆ ಕಾಲುವೆ ಮೇಲೆ ಅನಧಿಕೃತ ಪಂಪ್‌ಸೆಟ್ ತೆರವು ಕಾರ್ಯ ಚರಣೆ ವೇಳೆ ನೀರಾವರಿ ಅಧಿಕಾರಿಗಳೊಂದಿಗೆ ರೈತರು ವಾಗ್ವಾದ ನಡೆಸಿದ ಘಟನೆ ತಾಲೂಕಿನ ರಾಮತ್ನಾಳ ಗ್ರಾಮದ ಸಮೀಪ ನಡೆದಿದೆ.
ತುಂಗಭದ್ರಾ ಎಡದಂಡೆ ಕಾಲುವೆಯ 55ನೇ ವಿತ ರಣಾ ಕಾಲುವೆಯ ಬಳಿ ನೀರಾವರಿ ಅಧಿಕಾರಿಗ ಳೊಂದಿಗೆ ಟೇಲೆಂಡ್ ರೈತರು ನಡುವೆ ಮಾತಿನ ಚಕಮಕಿ ಉಂಟಾಗಿ ವಾಗ್ವಾದ ನಡೆಯಿತು.
ಕಾಲುವೆ ಮೇಲೆ ಅನಧಿಕೃತ ಪಂಪ್‌ಸೆಟ್ ತೆರವು ಕಾರ್ಯಚರಣೆ ವೇಳೆ ಈ ಘಟನೆ ನಡೆದಿದೆ.
ಕೊನೆ ಭಾಗಕ್ಕೆ ನೀರು ಬರಾದ ಹಿನ್ನೆಲೆಯಲ್ಲಿ ಬೆಳೆ ಹಾಳಾಗಿವೆ, ನೀರು ಪಡೆಯಲು ಪಂಪ್ ಸೆಟ್ ಹಾಕಿದ್ದೇವೆ, ನೀರು ಕೊಟ್ಟರೆ ನಾವೇ ಪಂಪ್‌ಸೆಟ್ ತೆಗೆಯುತ್ತೇವೆ ಎಂದು ನೀರಾವರಿ ಅಧಿಕಾರಿಗಳೊಂದಿಗೆ ನೂರಾರು ರೈತರು ಪಟ್ಟು ಹಿಡಿದು ವಾಗ್ವಾದ ನಡೆಸಿದರು.
ಪಂಪ್‌ಸೆಟ್ ತೆರವುಗೊಳಿಸುವಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು, ಜೆಸ್ಕಾಂ ಇಲಾಖೆ ಹಾಗೂ ಪೊಲೀಸರು ಸಹ ಇದ್ದರೂ ಸಹ ತೆರವು ಮಾಡದೇ ಅಡ್ಡಿಪಡಿಸಿದ್ದರಿಂದ ಹಿಂತಿರುಗಿದರು.